ದೇಶ

ಆಪ್ ಮುಗಿಸಲು ಮಾಧ್ಯಮಗಳು ಸುಪಾರಿ ಪಡೆದಿವೆ: ಕೇಜ್ರಿವಾಲ್

ಭ್ರಷ್ಟಾಚಾರ ಹೋರಾಟ ಹಾಗೂ ಮಾಧ್ಯಮಗಳ ಬೆಂಬಲದಿಂದ ಮೇಲೆ ಬಂದ ಅರವಿಂದ್ ಕೇಜ್ರಿವಾಲ್ ಅವರು ಇದೀಗ ಮಾದ್ಯಮಗಳ ವಿರುದ್ಧವೇ ಆರೋಪ ವ್ಯಕ್ತಪಡಿಸುತ್ತಿದ್ದು, ಆಮ್ ಆದ್ಮಿ ಪಕ್ಷವನ್ನು ತುಳಿಯಲು ಮಾದ್ಯಮಗಳು ಸುಪಾರಿ ಪಡೆದುಕೊಂಡಿದೆ ಎಂದು ಹೇಳಿದ್ದಾರೆ...

ಆಪ್ ಮುಗಿಸಲು ಮಾಧ್ಯಮಗಳು ಸುಪಾರಿ ಪಡೆದಿವೆ: ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ಭ್ರಷ್ಟಾಚಾರ ಹೋರಾಟ ಹಾಗೂ ಮಾಧ್ಯಮಗಳ ಬೆಂಬಲದಿಂದ ಮೇಲೆ ಬಂದ ಅರವಿಂದ್ ಕೇಜ್ರಿವಾಲ್ ಅವರು ಇದೀಗ ಮಾಧ್ಯಮಗಳ ವಿರುದ್ಧವೇ ಆರೋಪ ವ್ಯಕ್ತಪಡಿಸುತ್ತಿದ್ದು, ಆಮ್ ಆದ್ಮಿ ಪಕ್ಷವನ್ನು ತುಳಿಯಲು ಮಾಧ್ಯಮಗಳು ಸುಪಾರಿ ಪಡೆದುಕೊಂಡಿವೆ ಎಂದು ಹೇಳಿದ್ದಾರೆ.

ಖಾಸಗಿ ಮಾಧ್ಯಮವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಆಪ್ ವಿರುದ್ಧ ವಿರೋಧ ಪಕ್ಷಗಳು ದೊಡ್ಡ ಪಿತೂರಿ ನಡೆಸುತ್ತಿದ್ದು, ವಿರೋಧಿಗಳೊಂದಿಗೆ ಮಾಧ್ಯಮಗಳು ಕೈಜೋಡಿಸಿವೆ. ವಿರೋಧ ಪಕ್ಷದಿಂದ ಸುಪಾರಿ ಪಡೆದಿರುವ ಮಾಧ್ಯಮಗಳು ನಮ್ಮ ವಿರುದ್ಧ ಸುದ್ದಿ ಮಾಡುತ್ತಿದ್ದು, ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ನಕಲಿ ಪ್ರಮಾಣ ಪತ್ರ ಹಾಗೂ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣಗಳಂತಹ ವಿವಾದಗಳಲ್ಲಿ ಸಿಲುಕಿರುವ ಆಪ್ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಹಲವು ಟೀಕಾ ಪ್ರಹಾರಗಳಿಗೆ ಆಪ್ ಒಳಗಾಗಿದೆ.

ಹೀಗಾಗಿ ಮಾಧ್ಯಮಗಳ ವರದಿಯಿಂದ ಕೆಂಡಾಮಂಡಲವಾಗಿರುವ ಕೇಜ್ರಿವಾಲ್ ಅವರು ಮಾದ್ಯಮಗಳು ವಿರೋಧ ಪಕ್ಷಗಳಿಂದ ಸುಪಾರಿ ಪಡೆದುಕೊಂಡಿದ್ದು, ಆಪ್ ವಿರುದ್ಧ ಸುದ್ಧಿ ಮಾಡುತ್ತಿದೆ.

ನಕಲಿ ಪ್ರಮಾಣ ವಿವಾದದಲ್ಲಿ ಸಿಲುಕಿರುವ ತೋಮರ್ ನನ್ನು ರಕ್ಷಿಸಲು ಪ್ರಯತ್ನ ಮಾಡುತ್ತಿದ್ದೇನೆ ಹೇಳುತ್ತಾರೆ. ಆತನನ್ನು ರಕ್ಷಿಸಲು ಅವನಿಗೂ ನನಗೂ ಸ್ನೇಹ ಬಿಟ್ಟರೆ ಬೇರಾವುದೇ ಸಂಬಂಧವಿಲ್ಲ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕೂಡಲೇ ಸ್ಪಷ್ಟನೆ ನೀಡುವಂತೆ ತೋಮರ್ ನನ್ನು ಕೇಳಲಾಯಿತು.

ತೋಮರ್ ನೀಡಿದ ಪ್ರತಿಕ್ರಿಯೆಯನ್ನು ಕೇಳಿದರೆ ನಿಮಗೇ ಅನ್ನಿಸುತ್ತದೆ ಅವರು ಎಷ್ಟು ಮುಗ್ಧರು ಎಂದು. ಅವರ ಮುಗ್ಧತೆಯೇ ಇಂದು ಅವರ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಕಾರಣವಾಗಿದೆ. ತೋಮರ್ ಕುರಿತಂತೆ ನ್ಯಾಯಾಲಯ ಏನನ್ನೂ ಹೇಳದಿದ್ದರೂ, ಮಾಧ್ಯಮಗಳು ಎಲ್ಲವನ್ನು ಹೇಳುತ್ತಿದೆ ಎಂದು ಕೇಜ್ರಿವಾಲ್  ಹೇಳಿದ್ದಾರೆ.

ಇದೇ ವೇಳೆ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಕುರಿತಂತೆ ಮಾತನಾಡಿರುವ ಅವರು, ಪ್ರತಿಭಟನೆ ವೇಳೆ ಈ ರೀತಿಯ ಘಟನೆ ಸಂಭವಿಸುತ್ತದೆ ಎಂದು ಯಾರೊಬ್ಬರು ಅಂದುಕೊಂಡಿರಲಿಲ್ಲ. ಪ್ರತಿಭಟನೆ ವೇಳೆ ನಾವು ಏನನ್ನೂ ಹೇಳಿರಲಿಲ್ಲ. ಜಂತರ್ ಮಂತರ್ ನಲ್ಲಿ ಜನರು ಹೆಚ್ಚಾಗಿದ್ದುದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಾಣಿಸಲಿಲ್ಲ. ಒಂದು ವೇಳೆ ಈ ದೃಶ್ಯ ಕಣ್ಣಿಗೆ ಬಿದ್ದಿದ್ದರೆ ಪೊಲೀಸರು ರಕ್ಷಿಸುತ್ತಿದ್ದರು. ರೈತ ಆತ್ಮಹತ್ಯೆ ಮಾಡಿಕೊಂಡಾಗ ಆತನನ್ನು ಮರದಿಂದ ಕೆಳಗಿಳಿಸುವಾಗ ಆತ ಬದುಕಿಯೇ ಇದ್ದ, ನಂತರವಷ್ಟೇ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು ಎಂದು ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.