ರಾಹುಲ್ ಪಟ್ಟಕ್ಕೆ ವೇದಿಕೆ ಸಜ್ಜು?
57 ದಿನಗಳ ನಿಗೂಢ ಪ್ರವಾಸದಿಂದ ವಾಪಸಾಗಾಯ್ತು, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾಯ್ತು, ರೈತರ ಜತೆ ಪಾದಯಾತ್ರೆ ನಡೆಸಿದ್ದೂ...

ನವದೆಹಲಿ: 57 ದಿನಗಳ ನಿಗೂಢ ಪ್ರವಾಸದಿಂದ ವಾಪಸಾಗಾಯ್ತು, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾಯ್ತು, ರೈತರ ಜತೆ ಪಾದಯಾತ್ರೆ ನಡೆಸಿದ್ದೂ ಆಯ್ತು, ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲ ಸಿದಟಛಿತೆಗಳು ಆರಂಭಗೊಂಡಿವೆ.
ಇದೇ 6 ರಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ, ತಮ್ಮ ನಿವಾಸದಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಔತಣಕೂಟ ಆಯೋಜಿಸಿದ್ದಾರೆ. ಭೂಸ್ವಾಧೀನ ಮಸೂದೆ ಕುರಿತಂತೆ ಕೇಂದ್ರದ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕೆಂಬ ಬಗ್ಗೆ ರೂಪುರೇಷೆ ತಯಾರಿಸುವ ಸಲುವಾಗಿ ಈ ಔತಣಕೂಟ ಆಯೋಜಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಹಿಂದಿನ ಸತ್ಯ ಬೇರೆಯೇ ಇದೆ ಎನ್ನಲಾಗುತ್ತಿದೆ. ಪ್ರವಾಸದಿಂದ ವಾಪಸಾದ ರಾಹುಲ್ ಪೂರ್ಣ ಬದಲಾಗಿದ್ದಾರೆ, ಅವರಲ್ಲಿ ಹೊಸ ಹುರುಪು ಬಂದಿದೆ. ಪಕ್ಷಾಧ್ಯಕ್ಷ ಸ್ಥಾನ ನೀಡಲಿದು ಸೂಕ್ತ ಸಮಯವಲ್ಲವೇ ಎಂಬ ಬಗ್ಗೆ ಸೋನಿಯಾ, ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸಲಿದ್ದಾರೆಂದೂ ಹೇಳಲಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ರಾಹುಲ್ ಹಿಂಬಾಲಕರು, ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟುವ ಕಾಲ ಬಂದಿದೆ ಎಂದು ಹೇಳುವುದು ಈ ಸಭೆಯ ಅಜೆಂಡಾ ಎಂಬುದು ಪಕ್ಷದೊಳಗಿನ ಒಳಮಾತು. ಎಲ್ಲಕ್ಕಿಂತ ಹೆಚ್ಚಾಗಿ, ಲೋಕಸಭೆ ಮತ್ತು ರಾಜ್ಯಸಭೆ ಸಂಸದರ ಜತೆ ಸೋನಿಯಾ 5 ರಂದೇ ಮಾತುಕತೆ ನಡೆಸಲಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಾದ ಮೇಲೆ ಈ ವರ್ಷಾಂತ್ಯಕ್ಕೆ ಅಥವಾ ಅದಕ್ಕೂ ಮುನ್ನವೇ ರಾಹುಲ್ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಸಂಭವವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


