ದೇಶ

ವಿಶ್ವದ ದೀರ್ಘಾಯುಷಿ ಅಜ್ಜಿ ಮಿಸಾವೋ ಒಕಾವ ನಿಧನ

ವಿಶ್ವದ ಅತೀ ಹೆಚ್ಚು ದೀರ್ಘಾಯುಷಿ ಅಜ್ಜಿ ಎಂದು ಗಿನ್ನಿಸ್ ವಿಶ್ವದಾಖಲೆಯಲ್ಲಿ ಹೆಸರನ್ನು ಬರೆದಿದ್ದ ಜಪಾನಿನ ಮಿಸಾವೋ ಒಕಾವ (117) ಅವರು ಬುಧವಾರ ನಿಧನರಾಗಿದ್ದಾರೆ...

ವಿಶ್ವದ ದೀರ್ಘಾಯುಷಿ ಅಜ್ಜಿ ಮಿಸಾವೋ ಒಕಾವ ನಿಧನ
ವಿಶ್ವದ ದೀರ್ಘಾಯುಷಿ ಅಜ್ಜಿ ಮಿಸಾವೋ ಒಕಾವ ನಿಧನ
Published On :

ಟೋಕಿಯೋ: ವಿಶ್ವದ ಅತೀ ಹೆಚ್ಚು ದೀರ್ಘಾಯುಷಿ ಅಜ್ಜಿ ಎಂದುಗಿನ್ನಿಸ್ ದಾಖಲೆಯಲ್ಲಿ ಹೆಸರನ್ನು ಬರೆದಿದ್ದ ಜಪಾನಿನ ಮಿಸಾವೋ ಒಕಾವ (117) ಅವರು ಬುಧವಾರನಿಧನರಾಗಿದ್ದಾರೆ.

ಹೃದಯ ಸ್ತಂಬನದಿಂದಾಗಿ ಉಸಿರಾಟ ಸಾಧ್ಯವಾಗದೆ ಇಂದುಬೆಳಿಗ್ಗೆ 7ರ ಸುಮಾರಿಗೆ ನರ್ಸಿಂಗ್ ಹೋಮ್ ನಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಹಲವು ವರ್ಷಗಳಿಂದಯಾವುದೇ ತೊಂದರೆ ಇಲ್ಲದೆ ಆರೋಗ್ಯವಂತರಾಗಿದ್ದ ಮಿಸಾವೋ ಒಕಾವ ಅವರು ಕಳೆದ 10 ದಿನಗಳಿಂದಅನಾರೋಗ್ಯಕ್ಕೀಡಾಗಿದ್ದರು.

ಮಾರ್ಚ್ 5 ರಂದಷ್ಟೇ ತಮ್ಮ 117ಕ್ಕೆ ಕಾಲಿಟ್ಟಿದ್ದ ಮಿಸಾವೋಒಕಾವ ಅವರು ತಮ್ಮ ಹುಟ್ಟುಹಬ್ಬವನ್ನು ಜಪಾನಿನ ಮೇಯರ್ ರೊಂದಿಗೆ ಸಂಭ್ರಮದೊಂದಿಗೆ ಆಚರಿಸಿದ್ದರು.

ಜಪಾನ್ ನ ದೀರ್ಘಾಯುಷ್ಯ ಎಂಬ ಹೆಸರಿಗೆ ಪಾಲುದಾರರಾದ ಮಿಸಾವೋಒಕಾವ ಅವರು 1898ರ ಮಾರ್ಚ್ 5ರಂದು ಜನಿಸಿದ್ದರು. 1919 ರಂದು ವಿವಾಹದ ಇವರಿಗೆ ಮೂವರು ಮಕ್ಕಳು,4 ಮೊಮ್ಮಕ್ಕಳು ಮತ್ತು 6 ಜನ ಮರಿಮಕ್ಕಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.