ನನ್ನನ್ನು ಗರ್ಭಿಣಿ ಮಾಡಿದರೆ 350 ಪೌಂಡ್ ಹಣ ನೀಡುತ್ತೇನೆಂದ ಯುವತಿ
ನನ್ನನ್ನು ಗರ್ಭವತಿ ಮಾಡಿದರೆ ಕೈತುಂಬ ಹಣ ನೀಡುತ್ತೇನೆ ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳು...

ಲಂಡನ್: ನನ್ನನ್ನು ಗರ್ಭವತಿ ಮಾಡಿದರೆ ಕೈತುಂಬ ಹಣ ನೀಡುತ್ತೇನೆ ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳು ಸ್ಟೇಟಸ್ ಹಾಕಿದ್ದಾಳೆ.
ಈ ಯುವತಿಗೆ ಮಗು ಹೊಂದಬೇಕೆಂಬ ಆಸೆಯಿದ್ದು, ಈ ರೀತಿ ಘೋಷಿಸಿದ್ದಾಳೆ ಎಂದು ತಿಳಿದು ಬಂದಿದೆ. ರುಮೇನಿಯಾದ 25 ವರ್ಷದ ಅಡಿಲಿನಾ ಎಂಬ ಯುವತಿ ತನಗೆ ಮಗು ಹೊಂದಬೇಕು ಎಂಬ ಆಸೆ ಇದೆ.
ಆದರೆ, ನನ್ನೊಂದಿಗೆ ಸಂಬಂಧ ಹೊಂದಿದ ಪುರುಷರೆಲ್ಲರೂ ಮಗುವಿನ ವಿಷಯಕ್ಕೆ ಬಂದರೆ ಹಿಂಜರಿಯುತ್ತಾರೆ. ಇದರಿಂದ ನನಗೆ ಬೇಸರವಾಗಿದೆ. ಹಾಗಾಗಿ, ನನ್ನನ್ನು ಗರ್ಭಿಣಿ ಮಾಡಿದ ಪುರುಷರಿಗೆ 350 ಪೌಂಡ್ ಹಣ ನೀಡುತ್ತೇನೆ ಎಂದು ಸ್ಟೇಟಸ್ ಹಾಕಿದ್ದಾಳಂತೆ.
ಈಕೆಯ ಸಾಮಾಜಿಕ ಜಾಲ ತಾಣದ ಸ್ಟೇಟಸ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಪ್ರಚಾರಕ್ಕಾಗಿ ಈಕೆ ಈ ರೀತಿ ಸ್ಟೇಟಸ್ ಹಾಕಿದ್ದಾಳೆ ಎಂದು ಹೀಗಳೆದಿದ್ದಾರೆ. ಇನ್ನೂ ಕೆಲವರು ಮಗು ಹೊಂದಬೇಕೆಂಬ ಬಯಕೆಯಿಂದಾಗಿ ಆಕೆ ಈ ವಿಧಾನಕ್ಕೆ ಮೊರೆ ಹೋಗಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇರಲಿ ಈಕೆಯ ಧೈರ್ಯ ಮೆಚ್ಚುವಂತದ್ದೇ ಎಂದು ಇನ್ನು ಕೆಲವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


