ಗಂಗೆಯನ್ನು ತಂದಿದ್ದು ಯಾರು?
ಗಂಗಾ ನದಿಯ ಮೂಲದ ಬಗ್ಗೆ ಬಿಜೆಪಿ ಸಂಸದರೊಬ್ಬರು ಕೇಳಿದ ಪ್ರಶ್ನೆ ಎಲ್ಲ ಸದಸ್ಯರನ್ನು ಅವಕ್ಕಾಗಿಸಿದ ಪ್ರಸಂಗ ಲೋಕಸಭೆಯಲ್ಲಿ ಗುರುವಾರ ನಡೆಯಿತು...

ನವದೆಹಲಿ: ಗಂಗಾ ನದಿಯ ಮೂಲದ ಬಗ್ಗೆ ಬಿಜೆಪಿ ಸಂಸದರೊಬ್ಬರು ಕೇಳಿದ ಪ್ರಶ್ನೆ ಎಲ್ಲ ಸದಸ್ಯರನ್ನು ಅವಕ್ಕಾಗಿಸಿದ ಪ್ರಸಂಗ ಲೋಕಸಭೆಯಲ್ಲಿ ಗುರುವಾರ ನಡೆಯಿತು.
ಶೂನ್ಯ ವೇಳೆಯಲ್ಲಿ ಎದ್ದು ನಿಂತ ಸಂಸದ ಪ್ರತಾಪ್‍ಸಿನ್ಹಾ ಚೌಹಾಣ್, `ಗಂಗೆಯನ್ನು ಭೂಮಿಗೆ ತಂದವರಾರು? ಅದನ್ನೇಕೆ ತಂದರು... ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಏನು ಪ್ರಯೋಜನ ಎಂದು ನನಗೆ ಗೊತ್ತಾಗಬೇಕು' ಎಂದರು.
ಈ ಪ್ರಶ್ನೆ ಕೇಳುತ್ತಿದ್ದಂತೆ ಅಲ್ಲಿದ್ದವರೆಲ್ಲ ಮುಖ ಮುಖ ನೋಡಿಕೊಂಡು ಗೊಳ್ಳೆಂದು ನಕ್ಕುಬಿಟ್ಟರು. ಸ್ವತಃ ಸ್ಪೀಕರ್ ಕೂಡ ಗೊಂದಲಕ್ಕೀಡಾಗಿ, `ಏನಿದು? ಇದೂ ಒಂದು ಪ್ರಶ್ನೆಯೇ?' ಎಂದು ಕೇಳಿದರು. ನಂತರ ಅದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಹಾಯಕ ಸಚಿವ ಸನ್ವಾರ್ ಲಾಲ್ ಜಾಟ್, ಇದೊಂದು ಐತಿಹಾಸಿಕ ವಿಚಾರ. ಜನರ ಕ್ಷೇಮಾಭಿವೃದ್ದಿಗಾಗಿ ಶಿವನನ್ನು ಒಲಿಸಿ ಭಗೀ ರಥನು ಗಂಗೆಯನ್ನು ಭೂಮಿಗೆ ತಂದ ಎಂಬುವುದು ಪ್ರತೀತಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


