6,200 ಭಾರತೀಯರು ವಿದೇಶಿ ಜೈಲುಗಳಲ್ಲಿ ಸೆರೆ
6200ಕ್ಕೂ ಹೆಚ್ಚು ಭಾರತೀಯರು ವಿದೇಶಿ ಜೈಲುಗಳಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಅತಿ ಹೆಚ್ಚು ಅಂದರೆ 1,508 ಜನರು ಸೌಧಿ ಅರೇಬಿಯಾದ ಕಾರಾಗೃಹಗಳಲ್ಲಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದೆ.

ನವದೆಹಲಿ: 6200ಕ್ಕೂ ಹೆಚ್ಚು ಭಾರತೀಯರು ವಿದೇಶಿ ಜೈಲುಗಳಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಅತಿ ಹೆಚ್ಚು ಅಂದರೆ 1,508 ಜನರು ಸೌಧಿ ಅರೇಬಿಯಾದ ಕಾರಾಗೃಹಗಳಲ್ಲಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿ.ಕೆ.ಸಿಂಗ್, ಮೀನುಗಾರರು ಸೇರಿದಂತೆ ಒಟ್ಟು 6,290 ಭಾರತೀಯ ಪ್ರಜೆಗಳು 72 ರಾಷ್ಟ್ರಗಳ ಜೈಲುಗಳಲ್ಲಿದ್ದಾರೆ ಎಂದು ಸದನಕ್ಕೆ ತಿಳಿಸಿದರು.
ಶಿಕ್ಷೆಗೆ ಒಳಗಾದ ಕೈದಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ 20 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು 45 ಜನರನ್ನು ಸ್ವದೇಶಕ್ಕೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದರು.
ಸೌದಿ ಅರೇಬಿಯಾದಲ್ಲಿ 1,508, ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ 785, ನೆರಯ ನೇಪಾಳದಲ್ಲಿ 614, ಇಂಗ್ಲೆಂಡಿನಲ್ಲಿ 437 ಹಾಗೂ ಪಾಕಿಸ್ತಾನದ ಜೈಲುಗಳಲ್ಲಿ 352 ಭಾರತೀಯ ಪ್ರಜೆಗಳು ಸಿಲುಕಿದ್ದಾರೆ.
ಇನ್ನು, ಗಲ್ಫ್ ರಾಷ್ಟ್ರಗಳಾದ ಬಹ್ರೈನ್, ಇರಾಕ್, ಇರಾನ್, ಕುವೈತ್, ಓಮನ್, ಕತಾರ್ ಮತ್ತು ಯೆಮೆನ್‌ಗಳಲ್ಲಿ ಒಟ್ಟು 2,909 ಭಾರತೀಯರು ಸೆರೆಮನೆಯಲ್ಲಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


