ಸುಬ್ರಹ್ಮಣ್ಯನ್ ಸ್ವಾಮಿ ಹೇಳಿಕೆ ಸಮುದಾಯಗಳ ನಡುವೆ ಘರ್ಷಣೆ ಸೃಷ್ಟಿಸುತ್ತದೆ: ಪಿಡಿಪಿ
ಸುಬ್ರಹ್ಮಣನ್ ಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ಎರಡು ಸಮುದಾಯಗಳ ನಡುವೆ ಘರ್ಷಣೆಯನ್ನುಂಟು ಮಾಡುತ್ತದೆ ಎಂದು ಪಿಡಿಪಿ ಮಂಗಳವಾರ ಹೇಳಿದೆ...

ನವದೆಹಲಿ: ಸುಬ್ರಹ್ಮಣನ್ ಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ಎರಡು ಸಮುದಾಯಗಳ ನಡುವೆ ಘರ್ಷಣೆಯನ್ನುಂಟು ಮಾಡುತ್ತದೆ ಎಂದು ಪಿಡಿಪಿ ಮಂಗಳವಾರ ಹೇಳಿದೆ.
ಗುವಾಹಟಿಯಲ್ಲಿ ಹಾಜರಿದ್ದ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಮಸೀದಿ ಎಂಬುದು ಧಾರ್ಮಿಕ ಸ್ಥಳವಲ್ಲ, ಇದೊಂದು ಕಟ್ಟಡವಷ್ಟೇ. ಈ ಕಟ್ಟಡ ಯಾವಾಗ ಬೇಕಾದರು ಕೆಡವಬಹುದು. ನನ್ನ ಈ ಹೇಳಿಕೆಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಚರ್ಚಿಸಲು ನಾನು ಸಿದ್ಧನಿದ್ದೇನೆ. ಏಕೆಂದರೆ ಈ ಮಾಹಿತಿ ನನಗೆ ಸೌದಿ ಅರೇಬಿಯಾದ ಜನರಿಂದಲೇ ತಿಳಿದುಬಂದಿದ್ದು ಎಂದು ವಿವಾದ್ಮಕ ಹೇಳಿಕೆಯೊಂದನ್ನು ನೀಡಿದ್ದರು.
ಸುಬ್ರಹ್ಮಣ್ಯನ್ ಸ್ವಾಮಿ ಅವರ ಈ ಹೇಳಿಕೆ ದೇಶಾದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿವಾದ ಕುರಿತಂತೆ ಪಿಡಿಪಿಯ ವಕ್ತಾರ ನಯೀಮ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದು, ಸುಬ್ರಹ್ಮಣ್ಯನ್ ಸ್ವಾಮಿ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಉನ್ನತ ಸ್ಥಾನದಲ್ಲಿರುವಂತ ಅಧಿಕಾರಿಗಳು ಈ ರೀತಿಯ ಹೇಳಿಕೆ ನೀಡುವುದು ತಪ್ಪು. ಈ ರೀತಿಯ ಹೇಳಿಕೆಗಳು ಸಮುದಾಯಗಳ ನಡುವೆ ದಂಗೆ ಏರ್ಪಡುವಂತೆ ಮಾಡುತ್ತದೆ. ಈ ಹೇಳಿಕೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸುವಂತೆ ಮನವಿ ಇಡಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


