ಲೋಕಸಭೆ ಚುನಾವಣೆ ಫಲಿತಾಂಶ ದಿನ ಟಿವಿ ನೋಡದೆ ಧ್ಯಾನಕ್ಕೆ ಶರಣಾಗಿದ್ದ ಮೋದಿ!
ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಜಯಗಳಿಸಿದ್ದ ನಿಮಗೆಲ್ಲ ತಿಳಿದೆ ಇದೆ. ಫಲಿತಾಂಶ ದಿನ ಎಲ್ಲಾ ರಾಜಕೀಯ ಪಕ್ಷಗಳು ಸೇರಿದಂತೆ ದೇಶದ ಜನತೆ ಫಲಿತಾಂಶಕ್ಕಾಗಿ ಕಾತುರರಾಗಿದ್ದರು.

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಜಯಗಳಿಸಿದ್ದ ನಿಮಗೆಲ್ಲ ತಿಳಿದೆ ಇದೆ. ಫಲಿತಾಂಶ ದಿನ ಎಲ್ಲಾ ರಾಜಕೀಯ ಪಕ್ಷಗಳು ಸೇರಿದಂತೆ ದೇಶದ ಜನತೆ ಫಲಿತಾಂಶಕ್ಕಾಗಿ ಕಾತುರರಾಗಿದ್ದರು.
ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಮಾತ್ರ 2014, ಮೇ 16ರಂದು ಮತ ಎಣಿಕೆ ದಿನ ಟಿವಿ ಮುಂದೆ ಕೂರದೆ ಧ್ಯಾನಕ್ಕೆ ಶರಣಾಗಿದ್ದರು ಎಂಬ ವಿಷಯವನ್ನು ಲ್ಯಾನ್ಸ್ ಪ್ರೈಸ್ ಎಂಬುವರು ತಮ್ಮ ಹೊಸ ಪುಸ್ತಕದಲ್ಲಿ ಬರೆದಿದ್ದಾರೆ.
ನರೇಂದ್ರ ಮೋದಿ ಅಂದು ಮಧ್ಯಾಹ್ನ 12 ಗಂಟೆಯವರೆಗೂ ಯಾವ ಸಂಪರ್ಕವೂ ಇಲ್ಲದೇ ಧ್ಯಾನದಲ್ಲಿ ನಿರತರಾಗಿದ್ದರಂತೆ. ಟಿವಿ ಆನ್ ಆಗಿರಲಿಲ್ಲ; ಯಾವುದೇ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ.
ಅಂದು ಮೋದಿ ದೇವರ ಪೂಜೆ, ಧ್ಯಾನದಲ್ಲಿ ತಲ್ಲೀನರಾಗಿದ್ದರು. ಮಧ್ಯಾಹ್ನ 12ಗಂಟೆ ನಂತರವಷ್ಟೇ ಅವರು ಫೋನ್ ಕರೆಗಳನ್ನು ಸ್ವೀಕರಿಸಲು ಆರಂಭಿಸಿದ್ದು. ಅವರಿಗೆ ಮೊದಲ ಕರೆ ಮಾಡಿದ್ದು ಅಂದಿನ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್, ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನಿಶ್ಚಿತ ಎಂದು ರಾಜನಾಥ್ ಸಿಂಗ್ ಹೇಳಿದಾಗಲಷ್ಟೇ ಮೋದಿಗೆ ಗೆಲುವಿನ ಅರಿವಾಗಿದ್ದು.
ಈ ವಿಷಯವನ್ನ ಲ್ಯಾನ್ಸ್ ಪ್ರೈಸ್ ಎಂಬುವವರು ತಮ್ಮ ಹೊಸ ಪುಸ್ತಕದಲ್ಲಿ ಬರೆದಿದ್ದಾರೆ. "The Modi Effect: Inside Narendra Modi's Campaign to Transform India" ಎಂಬ ಪುಸ್ತಕದಲ್ಲಿ ಮೋದಿ ಜೊತೆಗಿನ ಸಂದರ್ಶನದ ಅನೇಕ ವಿವರಗಳನ್ನ ದಾಖಲಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದಕ್ಕಿಸಲು ಮೋದಿ ರೂಪಿಸಿದ ಕಾರ್ಯತಂತ್ರಗಳನ್ನ ಲ್ಯಾನ್ಸ್ ಪ್ರೈಸ್ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಲ್ಯಾನ್ಸ್ ಪ್ರೈಸ್ ಮಾಜಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


