ದೇಶ

ಬಿಜೆಪಿಗೆ ಬೇಹು ಬೇಗುದಿ

ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್ ಹೊಸ ಗೂಬೆ ಕೂರಿಸಿದೆ. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಕೇಂದ್ರ ಸರ್ಕಾರವು `ರಾಜಕೀಯ ಗೂಢಚಾರಿಕೆ'...

ಬಿಜೆಪಿಗೆ ಬೇಹು ಬೇಗುದಿ
ರಾಹುಲ್ ಗಾಂಧಿ
Published On :

ನವದೆಹಲಿ: ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್ ಹೊಸ ಗೂಬೆ ಕೂರಿಸಿದೆ. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಕೇಂದ್ರ ಸರ್ಕಾರವು `ರಾಜಕೀಯ ಗೂಢಚಾರಿಕೆ' ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಷ್ಟೇ ಅಲ್ಲ, ಈ ವಿಚಾರವನ್ನು ಸಂಸತ್ ನ ಮುಂದಿಡುವುದಾಗಿಯೂ ಹೇಳಿರುವಕಾಂಗ್ರೆಸ್, ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ರಾಜನಾಥ್‍ಸಿಂಗ್ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದೆ. ಆದರೆ ಗೂಢಚಾರಿಕೆ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಇದೊಂದು ಸರ್ವೇ ಸಾಮಾನ್ಯ ಪ್ರಕ್ರಿಯೆ . ಆದರೆ ಕಾಂಗ್ರೆಸ್  ಮಾತ್ರ ಪ್ರತಿಯೊಂದು ವಿಚಾರವನ್ನೂ ಇಟ್ಟುಕೊಂಡು ರಾಜಕೀಯ
ಮಾಡುತ್ತಿದೆ ಎಂದಿದೆ. ದೆಹಲಿ ಪೊಲೀಸರು ಕೂಡ ಇದೊಂದು ದೈನಂದಿನ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪವೇನು?: ಸಂಸತ್ ಅಧಿವೇಶನ ಆರಂಭವಾದಾಗಿನಿಂದ ರಾಹುಲ್ ರಜೆಯಲ್ಲಿದ್ದಾರೆ. ಹೀಗಿರುವಾಗ ಕೆಲ ದಿನಗಳ ಹಿಂದೆ ರಾಹುಲ್ ನಿವಾಸಕ್ಕೆ ಬಂದಿದ್ದ ದೆಹಲಿ ಪೋಲೀಸ್ ಅಧಿಕಾರಿ ಶಂಶೇರ್ ಸಿಂಗ್, ರಾಹುಲ್ ಬಗ್ಗೆ ಅನೇಕ ಮಾಹಿತಿಗಳನ್ನು ಕಲೆಹಾಕಿದ್ದರು. ಇದೇಈಗ ವಿವಾದಕ್ಕೆ ಕಾರಣ. ಕಾಂಗ್ರೆಸ್ಆರೋಪದ ಹಿನ್ನೆಲೆಯಲ್ಲಿ ಶನಿವಾರ ರಾಹುಲ್ ಕಾರ್ಯಾಲಯಕ್ಕೆ ಭೇಟಿ ನೀಡಿದ ದೆಹಲಿ ಪೋಲೀಸರ ತಂಡ, ಅಲ್ಲಿಗೆಬಂದಿದ್ದ ಪೋಲೀಸ್ ಅಧಿಕಾರಿ ಯಾರು, ಏನೇನು ಪ್ರಶ್ನಿಸಿದರು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆ ಅಧಿಕಾರಿಯ ಫೋಟೋವನ್ನು ಪಡೆದಿದ್ದಾರೆ.
ರಾಜಕೀಯ ಒತ್ತಡ ಇರಲಿಲ್ಲ: ಪ್ರಧಾನಿ ಕಾರ್ಯಾಲಯವಾಗಲೀ, ಗೃಹ ಇಲಾಖೆಯಾಗಲೀ ರಾಹುಲ್ ನಿವಾಸಕ್ಕೆ ತೆರಳುವಂತೆ ಸೂಚಿಸಿಲ್ಲ. ಪೋಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡವೂ ಬಂದಿಲ್ಲ. ಅದೇ ದಿನ ಪೋಲೀಸರು ಸಂಸದರಾದ ಕೃಷನ್ ಪಾಲ್ ಗುಜ್ಜರ್, ನರೇಶ್ ಅಗರ್ವಾಲ್, ವೀರಪ್ಪ ಮೊಯ್ಲಿ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಮನೆಗೂ ಹೋಗಿ ಮಾಹಿತಿ ಸಂಗ್ರಹಿಸಿದೆ. ತಮ್ಮ ವ್ಯಾಪ್ತಿ ಯೊಳಗೆ ಬರುವ ಗಣ್ಯರ ಮಾಹಿತಿ ಪಡೆಯುವುದು ಬೀಟ್ ಪೋಲೀಸರ ಕರ್ತವ್ಯ ಎಂದಿದ್ದಾರೆ ದೆಹಲಿ ಪೊ ಲೀಸ್ ಆಯುಕ್ತ ಬಸ್ಸಿ.

ಕಾಂಗ್ರೆಸ್ ವಿರುದಟಛಿ ಬಿಜೆಪಿ ವಾಗ್ದಾಳಿ:`ಗೂಢಚಾರಿಕೆ' ವಿಚಾರದಲ್ಲಿ ಮೋದಿ ಸರ್ಕಾರದ ವಿರುದಟಛಿ ಹರಿಹಾಯುತ್ತಿರುವ ಕಾಂಗ್ರೆಸ್‍ಗೆ ಬಿಜೆಪಿ ಟಾಂಗ್ ನೀಡಿದೆ. ಕಾಂಗ್ರೆಸ್ ತನ್ನನ್ನು ತಾನು ಕಾನೂನಿಗಿಂತ ಮೇಲೆ ಎಂದು ಭಾವಿಸಿದೆ. `ದೈನಂದಿನ' ಸಾಮಾನ್ಯ ವಿಚಾರಗಳಲ್ಲೂ ಸಂಚನ್ನು ಹುಡುಕುವುದು ಆ ಪಕ್ಷದ ಅಭ್ಯಾಸ ಎಂದಿದೆ. ಜತೆಗೆ, ರಾಹುಲ್‍ರ ದೀರ್ಘ ಗೈರಿನಿಂದ ಗೊಂದಲಕ್ಕೀಡಾಗಿರುವ ನಾಯಕರು, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ, ಅವರೇನು ಹೇಳುತ್ತಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ ಎಂದೂ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.