ದೇಶ

ಸೆಷಲ್ಸ್ ಜತೆ ಮೋದಿ ಒಪ್ಪಂದ

ನೆರೆಯ ದೇಶದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಐದು ದಿನಗಳ ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ...

ಸೆಷಲ್ಸ್ ಜತೆ ಮೋದಿ ಒಪ್ಪಂದ
ಸೆಷೆಲ್ಸ್ ಗೆ ಬಂದಿಳಿದ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Published On :

ವಿಕ್ಟೋರಿಯಾ: ನೆರೆಯ ದೇಶದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಐದು ದಿನಗಳ ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಬುಧವಾರ ದ್ವೀಪ ರಾಷ್ಟ್ರವಾದ ಸೆಷಲ್ಸ್ ಗೆ ಭೇಟಿ ನೀಡಿದ್ದಾರೆ.

ಈ ಮೊದಲ ಭೇಟಿಯ ವೇಳೆ ದ್ವೀಪ ರಾಷ್ಟ್ರದೊಂದಿಗೆ ಮಹತ್ವದ ಒಪ್ಪಂದಗಳಿಗೆ ಮೋದಿ ಸಹಿ ಹಾಕಿದ್ದಾರೆ. ಜಲಸಂಪನ್ಮೂಲದ ಮ್ಯಾಪಿಂಗ್‍ಗೆ ನೆರವು, ಕರಾವಳಿ ಭದ್ರತೆ ಬಿಗಿಗೊಳಿಸಲು ಎರಡನೇ ಡ್ರೋಣ್ ವಿಮಾನ ಪೂರೈಕೆ ಮತ್ತು ದ್ವೀಪ ರಾಷ್ಟ್ರದ ನಾಗರೀಕರಿಗೆ 3 ತಿಂಗಳ ಉಚಿತ ವೀಸಾ ಒದಗಿಸುವ ಸಂಬಂಧ ಪ್ರಧಾನಿ ಮೋದಿ ಅವರು ಸೆಷೆಲ್ಸ್ ಅಧ್ಯಕ್ಷ ಜೇಮ್ಸ್ ಅಲಿಕ್ಸ್ ಮಿಶೆಲ್ ಅವರ ಜತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ.

34 ವರ್ಷಗಳ  ಬಳಿಕ ಭಾರತೀಯ ಪ್ರಧಾನಿಯೊಬ್ಬರು ಸೆಷೆಲ್ಸ್ ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮಾರಿಷಸ್ ಮತ್ತು ಶ್ರೀಲಂಕಾದ ಜತೆಗೆ ಭಾರತ ಮಾಡಿಕೊಳ್ಳುತ್ತಿರುವ ಸಮುದ್ರ ರಕ್ಷಣೆಗೆ ಸಂಬಂಧಿಸಿದ ಸಹಕಾರ ಒಪ್ಪಂದದಲ್ಲಿ ಸೆಷೆಲ್ಸ್ ಅನ್ನೂ ಭಾಗಿದಾರನನ್ನಾಗಿ ಮಾಡುವುದಾಗಿಯೂ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಸೆಷೆಲ್ಸ್ ನಿಂದ ಮೋದಿ ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಗೆ ಆಗಮಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.