ಸೋನಂ ಕಪೂರ್ ಮುಂಬೈಗೆ ಶಿಫ್ಟ್
ಹಂದಿಜ್ವರಕ್ಕೆ ತುತ್ತಾಗಿರುವ ಬಾಲಿವುಡ್ ನಟಿ ಸೋನಂ ಕಪೂರ್ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ರಾಜಸ್ಥಾನದಿಂದ ...

ನವದೆಹಲಿ/ಮುಂಬೈ: ಹಂದಿಜ್ವರಕ್ಕೆ ತುತ್ತಾಗಿರುವ ಬಾಲಿವುಡ್ ನಟಿ ಸೋನಂ ಕಪೂರ್ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ರಾಜಸ್ಥಾನದಿಂದ ಮುಂಬೈಗೆ ಕರೆತಂದು, ಇಲ್ಲಿನ ಕೋಕಿಲಾಬೆನ್ ಆಸ್ಪತೆಗೆ ದಾಖಲಿಸಲಾಗಿದೆ. "ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಶೂಟಿಂಗ್ಗೆ ರಾಜಕೋಟ್ಗೆ ತೆರಳಿದ್ದಾಗ ಸೋನಂ ಹಂದಿ ಜ್ವರಕ್ಕೆ ತುತ್ತಾಗಿದ್ದರು. ಸೋನಂ ಶೀತ, ಜ್ವರ ಕಾಣಿ ಸಿಕೊಂಡಿದ್ದು, ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಈಕೆಗೆ ಹಂದಿಜ್ವರ ಇದೆ ಎಂಬುದು ಪತ್ತೆಯಾಗಿತ್ತು.
ಹಂದಿ ಜ್ವರಕ್ಕೆ 1,075 ಬಲಿ: ಹಂದಿ ಜ್ವರಕ್ಕೆ ಮತ್ತೆ 34 ಮಂದಿ ಬಲಿಯಾಗಿದ್ದು, ದೇಶದಲ್ಲಿ ಈ ರೋಗಕ್ಕೆ ಸಾವನ್ನಪ್ಪಿದವರ ಸಂಖ್ಯೆ 1,075ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕು ತಗುಲಿದವರ ಸಂಖ್ಯೆ 20,000 ಗಡಿಯನ್ನು ಮುಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


