ದೇಶ

ಕೇರಳದಲ್ಲಿ ಕಾಂಗ್ರೆಸ್, ತ್ರಿಪುರಾದಲ್ಲಿ ಸಿಪಿಎಂ

ತಮಿಳುನಾಡು ಸಿಎಂ ಜಯಲಲಿತಾಗೆ ಭರ್ಜರಿ ಗೆಲವಿನ ಸಂಭ್ರಮ...

ಕೇರಳದಲ್ಲಿ ಕಾಂಗ್ರೆಸ್, ತ್ರಿಪುರಾದಲ್ಲಿ ಸಿಪಿಎಂ
ಜಯಲಲಿತಾ
Published On :
ನವದೆಹಲಿ: ಕೇರಳ, ಮಧ್ಯಪ್ರದೇಶ, ತ್ರಿಪುರಾ ಹಾಗೂ ಮೇಘಾಲಯದಲ್ಲೂ ಉಪಚುನಾವಣೆ ನಡೆದಿತ್ತು. ಎಲ್ಲ 5 ರಾಜ್ಯಗಳ ಫಲಿತಾಂಶವೂ ಮಂಗಳವಾರವೇ ಪ್ರಕಟವಾಗಿದೆ.
ಕೇರಳದ ಅರುವಿಕ್ಕಾರಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೆ.ಎಸ್. ಶಬರಿನಾಥನ್ ಅವರು ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಯುಡಿಎಫ್ ಸರ್ಕಾರಕ್ಕೆ ಜಯ ಸಿಕ್ಕಂತಾಗಿದೆ. ಮಧ್ಯಪ್ರದೇಶದ ಗರೋತ್ ವಿಧಾನಸಭಾ ಸೀಟನ್ನು ಬಿಜೆಪಿ ಉಳಿಸಿಕೊಂಡಿದೆ. ಇಲ್ಲಿ ಬಿಜೆಪಿಯ ಚಂದರ್ ಸಿಂಗ್ ಸಿಸೋಡಿಯಾ ಅವರು ಕಾಂಗ್ರೆಸ್‍ನ ಸುಭಾಶ್ ಕುಮಾರ್ ಸೊಜಾತಿಯಾರನ್ನು ಸೋಲಿಸಿದ್ದಾರೆ. ಇದೇ ವೇಳೆ, ತ್ರಿಪುರಾದಲ್ಲಿ ಎರಡೂ ಸೀಟುಗಳು ಸಿಪಿಎಂ ಪಾಲಾಗಿವೆ. ಮೇಘಾಲಯದ ಚೋಕ್ ಪಾಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಉಪಚುನಾವಣೆ ಜಯಾ ಜಯಭೇರಿ, ಠೇವಣಿ ಕಳೆದುಕೊಂಡ ಸಿಪಿಐನ ಸಿ.ಮಹೇಂದ್ರನ್
ತಮಿಳುನಾಡು ಸಿಎಂ ಜಯಲಲಿತಾಗೆ ಭರ್ಜರಿ ಗೆಲವಿನ ಸಂಭ್ರಮ. ತಮಿಳುನಾಡಿನ ಆರ್.ಕೆ.ನಗರ ಉಪಚುನಾವಣೆ ಯಲ್ಲಿ ಜಯಲಲಿತಾ ಅವರು 1,50,722 ಮತಗಳ ಅಂತರದಿಂದ ಜಯಸಾ„ಸಿದ್ದಾರೆ. ಇತರೆ ಅಭ್ಯರ್ಥಿಗಳಂತೆ ಜಯಾ ಅವರ ಪ್ರತಿಸ್ಪರ್ಧಿ ಸಿಪಿಐನ ಸಿ. ಮಹೇಂದ್ರನ್ ಠೇವಣಿ ಕಳೆದುಕೊಂಡಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾತನಾಡಿದ ಜಯಾ, ``ಇದೊಂದು ಐತಿಹಾಸಿಕ ಗೆಲವು. ಮತದಾರರ ನಿರೀಕ್ಷೆ, ಅಗತ್ಯಗಳನ್ನು ಪೂರೈಸಲು ಅವಿರತವಾಗಿ ಶ್ರಮಿಸುತ್ತೇನೆ ಎಂದಿದ್ದಾg. ಫಲಿತಾಂಶ ಹೊರಬೀಳುತ್ತಿದ್ದಂತೆ ತ.ನಾಡಿನಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.