ದೇಶ

ತಂದೆ ಅತ್ಯಾಚಾರಿ ಎಂದು ನನ್ನ ಮಗಳಿಗೆ ಹೇಳುತ್ತೇನೆ

ನಿನ್ನ ತಂದೆ ಅತ್ಯಾಚಾರಿ ಎಂದು ಒಂದು ದಿನ ನನ್ನ ಮಗಳಿಗೆ ಹೇಳುತ್ತೇನೆ...! ಹದಿನಾಲ್ಕು ವರ್ಷದಲ್ಲೇ ಅತ್ಯಾಚಾರಕ್ಕೊಳಗಾಗಿ ಯಾರಿಗೂ...

ತಂದೆ ಅತ್ಯಾಚಾರಿ ಎಂದು ನನ್ನ ಮಗಳಿಗೆ ಹೇಳುತ್ತೇನೆ
ತಾಯಿ ಮಗಳು
Published On :

ಚೆನ್ನೈ: ನಿನ್ನ ತಂದೆ ಅತ್ಯಾಚಾರಿ ಎಂದು ಒಂದು ದಿನ ನನ್ನ ಮಗಳಿಗೆ ಹೇಳುತ್ತೇನೆ...! ಹದಿನಾಲ್ಕು ವರ್ಷದಲ್ಲೇ ಅತ್ಯಾಚಾರಕ್ಕೊಳಗಾಗಿ ಯಾರಿಗೂ ಬೇಡದ ತಾಯಿಯಾಗಿರುವ ತಮಿಳುನಾಡಿನ ಕಡಲೂರು ಸಮೀಪದ ಯುವತಿ ಆಕ್ರೋಶದಿಂದ ಹೇಳುವ ಮಾತಿದು.

2008ರಲ್ಲಿ ಈಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಈಗ ಆಕೆಯ ಜತೆಗೆ ಪೋಷಕರೂ ಇಲ್ಲ. ಸಣ್ಣವಯಸ್ಸಿನಲ್ಲೇ ತಾಯಿಯಾಗಿರುವ ಆಗಿನ ಬಾಲಕಿಗೆ ಈಗ 21 ವರ್ಷ. ಕಡಲೂರಿನಿಂದ 80 ಕಿ.ಮೀ. ದೂರದ ಗ್ರಾಮವೊಂದರ ಒಂದೇ ಕೊಠಡಿಯಲ್ಲಿ ಬಾಡಿಗೆ ತಾಯಿಯಾಗಿ ಜೀವನ ದೂಕುತ್ತಿದ್ದಾಳೆ. ತನ್ನ ಮೇಲೆ ಅತ್ಯಾಚಾರ ನಡೆದು ಆರು ವರ್ಷವಾಗಿದ್ದರೂ ಆ ಘಟನೆಯನ್ನು ಈವರೆಗೂ ಮರೆಯಲು ಸಾಧ್ಯವಾಗುತ್ತಿಲ್ಲ.

ಯುವತಿಯ ಯಾತನಾಮಯ ಜೀವನದ ಬಗ್ಗೆ ಖಾಸಗಿ ಪತ್ರಿಕೆಯೊಂದು ಭಾನುವಾರ ವರದಿ ಮಾಡಿದೆ. ನ್ಯಾಯಾಧೀಶರಿಗೆ ನಾನು ಇಷ್ಟು ವರ್ಷ ಅನುಭವಿಸಿದ ಯಾತನೆಯ ಅರಿವಿದೆಯೇ?
ಅತ್ಯಾಚಾರದ ಬಳಿಕ ನಾನು ತಾಯಿಯಾಗಿರುವುದು ಆಕೆಗೆ ಗೊತ್ತಿದೆ. ಈಗ ಅವರು ಅತ್ಯಾಚಾರಿಯ ಜತೆಗೆ ಮದುವೆಯಾಗುವಂತೆ ಸೂಚಿಸಿದ್ದಾರೆ. ಅವರ ಈ ಆದೇಶ ನನ್ನನ್ನು ಮತ್ತೆ ಅದೇ ಯಾತನೆಗೆ ದೂಕಲಿದೆ.

ಅತ್ಯಾಚಾರಕ್ಕೊಳಗಾದ ಈ ಯುವತಿ ಪ್ರಸ್ತಾಪಿಸುತ್ತಿರುವ ನ್ಯಾಯಾಧೀಶ ಮದ್ರಾಸ್ ಹೈಕೋರ್ಟ್‍ಗೆ ಸೇರಿದವರು. ಇತ್ತೀಚೆಗೆ ನ್ಯಾಯಾಧೀಶ ಡಿ. ದೇವದಾಸ್ ಅವರು ಅತ್ಯಾಚಾರ ಮಾಡಿದ ವ್ಯಕ್ತಿಗೆ ಜಾಮೀನು ನೀಡಿದ್ದರು. ಅತ್ಯಾಚಾರಕ್ಕೊಳಗಾದ ಯುವತಿ ಜತೆಗೆ ಮದುವೆ ಸಂಧಾನಕ್ಕೆ ಅವಕಾಶ ಮಾಡಿಕೊಡಲು ಜಾಮೀನು ನೀಡಿದ್ದರು. ಇದಕ್ಕೆ ಯುವತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.