ದೇಶ

ಎನ್.ಡಿ.ಎ ಫ್ಯಾಸಿಸ್ಟ್ ಗಳ ಕೂಟ, ಜನತೆ ಅವರಿಗೆ ಪಾಠ ಕಲಿಸಲಿದ್ದಾರೆ: ಲಾಲು

ಎನ್.ಡಿ.ಎ ಮೈತ್ರಿಕೂಟವನ್ನು ಉಗ್ರ ಬಲಪಂಥೀಯ(ಫ್ಯಾಸಿಸ್ಟ್) ಒಕ್ಕೂಟ ಎಂದು ಅರ.ಜೆ.ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಎನ್.ಡಿ.ಎ ಫ್ಯಾಸಿಸ್ಟ್ ಗಳ ಕೂಟ, ಜನತೆ ಅವರಿಗೆ ಪಾಠ ಕಲಿಸಲಿದ್ದಾರೆ: ಲಾಲು
ಲಾಲು ಪ್ರಸಾದ್(ಸಂಗ್ರಹ ಚಿತ್ರ)
Published On :

ಪಾಟ್ನಾ: ಎನ್.ಡಿ.ಎ ಮೈತ್ರಿಕೂಟವನ್ನು ಉಗ್ರ ಬಲಪಂಥೀಯ(ಫ್ಯಾಸಿಸ್ಟ್) ಒಕ್ಕೂಟ ಎಂದಿರುವ ಅರ.ಜೆ.ಡಿ ಮುಖಂಡ ಲಾಲು ಪ್ರಸಾದ್ ಯಾದವ್, ಬಿಹಾರದ ಜನತೆ ಫ್ಯಾಸಿಸ್ಟ್ ಗಳ ಒಕ್ಕೂಟಕ್ಕೆ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಫ್ಯಾಸಿಸ್ಟ್ ಗಳ ಮೈತ್ರಿಕೂಟ ಇನ್ನೂ ಅಧಿಕಾರದಿಂದ ದೂರ ಉಳಿದಿದ್ದು ಅದರ ನಾಯಕರ ನಿಜವಾದ ಬಣ್ಣ ಬೆಳಕಿಗೆ ಬರುತ್ತಿದೆ. ಎನ್.ಡಿ.ಎ ನಾಯಕರು ಅನ್ಯರ ವಿರುದ್ಧ ಜಂಗಲ್ ರಾಜ್ ಕುರಿತು ಆರೋಪ ಮಾಡುತ್ತಾರೆ ಆದರೆ ಅದೇ ಪಕ್ಷದ ನಾಯಕರು ಒಬ್ಬ ಮುಖ್ಯಮಂತ್ರಿಯ ಮೇಲೆ ಹಲ್ಲೆ ನಡೆಸುವ ಮಾತನಾಡುತ್ತಾರೆ ಎಂದು ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ.

ಜೆಡಿಯು ಶಾಸಕ ಅನಂತ್ ಸಿಂಗ್ ನನ್ನು ವಿನಾಕಾರಣ ಬಲಿಪಶುವನ್ನಾಗಿಸಿದರೆ ತಮ್ಮ ಬೆಂಬಲಿಗರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎದೆ ಸೀಳುವುದಾಗಿ ರಾಷ್ಟ್ರೀಯ ಲೋಕ ಸಮತಾ ಪಕ್ಷದ ನಾಯಕ ಅರುಣ್ ಕುಮಾರ್ ಹೇಳಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿರುವ ಲಾಲು ಪ್ರಸಾದ್ ಯಾದವ್, ಒಬ್ಬ ಮುಖ್ಯಮಂತ್ರಿ ಮೇಲೆ ಹಲ್ಲೆ ನಡೆಸುವುದಾಗಿ ಹೇಳಿದ್ದರೂ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು  ಲೋಕ ಸಮತಾ ಪಕ್ಷದ ನಾಯಕನ ಹೇಳಿಕೆಯನ್ನು ಖಂಡಿಸಿಲ್ಲ ಎಂದು ಲಾಲು ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಿನದ್ದು 1990 ರ ಬಿಹಾರವಲ್ಲ, ಬಡವರ್ಗದ ಜನತೆ ಒಗ್ಗೂಡಿದ್ದಾರೆ. ಫ್ಯಾಸಿಸ್ಟ್ ಒಕ್ಕೂತವಾಗಿರುವ  ಎನ್.ಡಿ.ಎಗೆ ರಾಜ್ಯದ ಜನತೆ ಪಾಠ ಕಲಿಸಲಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.