ಗಾಂಧಿ ಹತ್ಯೆ ಪ್ರಕರಣದ ಅಂತಿಮ ಆರೋಪ ಪಟ್ಟಿ ನಾಪತ್ತೆ?
ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ದಾಖಲಿಸಿದ ಅಂತಿಮ ಆರೋಪ ಪಟ್ಟಿ ನಾಪತ್ತೆಯಾಗಿದೆ. ಒಡಿಶಾದ ಸಾಮಾಜಿಕ ಕಾರ್ಯಕರ್ತರೊಬ್ಬರು...

ನವದೆಹಲಿ: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ದಾಖಲಿಸಿದ ಅಂತಿಮ ಆರೋಪ ಪಟ್ಟಿ ನಾಪತ್ತೆಯಾಗಿದೆ. ಒಡಿಶಾದ ಸಾಮಾಜಿಕ ಕಾರ್ಯಕರ್ತರೊಬ್ಬರು ಗಾಂಧೀಯವರ ಹತ್ಯೆಯ ವಿವರಗಳನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಯತ್ನಿಸಿದಾಗ ಈ ವಿಷಯ ಬಹಿರಂಗಗೊಂಡಿದೆ. ಗಾಂಧೀಜಿಯವರ ಕುಟುಂಬದವರ ಒತ್ತಾಯಕ್ಕೆ ಮಣಿದು ಮಹಾತ್ಮಾ ಗಾಂಧಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಅದೇ ವೇಳೆ ಗಾಂಧೀಜಿ ಹತ್ಯೆಯ ಎಫ್‌ಐಆರ್ ಮತ್ತು ಆರೋಪಪಟ್ಟಿ ಬಹಿರಂಗಪಡಿಸುವಂತೆ ಸೆಂಟ್ರಲ್ ಇನ್‌ಫಾರ್ಮೇಷನ್ ಕಮಿಷನ್, ಗೃಹ ಸಚಿವಾಲಯಕ್ಕೆ ಆದೇಶಿಸಿತ್ತು. ಸಚಿವಾಲಯ ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ, ಗಾಂಧಿ ಸ್ಮೃತಿ ನಿರ್ದೇಶಕ ಮೊದಲಾದವರಿಗೆ ಈ ಆದೇಶವನ್ನು ವರ್ಗಾಯಿಸಿತ್ತು.
ಗಾಂಧಿ ಕುಟುಂಬದವರ ಮನವಿ ಮೇರೆಗೆ ಗಾಂಧಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿಲ್ಲ ಎಂದು ಗಾಂಧಿ ಸ್ಮೃತಿ ಅಧಿಕಾರಿಗಳು ನ್ಯಾಷನಲ್ ಅರ್ಕೈವ್ಸ್ ಗೆ ಹೇಳಿದ್ದಾರೆ.
ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಎಫ್‌ಐಆರ್, ಚಾರ್ಜ್‌ಶೀಟ್ ಇದ್ಯಾವುದರ ಬಗ್ಗೆ ನಮಗೆ ಮಾಹಿತಿ ಇಲ್ಲವೆಂದು ಗಾಂಧಿ ಸ್ಮೃತಿ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ತುಘ್ಲಕ್ ಪೊಲೀಸ್ ಸ್ಟೇಷನ್‌ನಲ್ಲಿ ಕೇಸು ದಾಖಲಾಗಿತ್ತು ಎಂದು ಇನ್‌ಫಾರ್ಮೇಶನ್ ಕಮಿಷನರ್ ಶರತ್ ಸಬರ್‌ವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


