ದೇಶ

90 ವರ್ಷದಲ್ಲೇ ಭೀಕರ ನೆರೆ, ಗುಜರಾತಲ್ಲಿ 5 ಸಿಂಹ ಬಲಿ

ಗುಜರಾತ್ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಗುಜರಾತ್‍ನ ಗುಜರಾತ್ ಮತ್ತು ಸೌರಾಷ್ಟ್ರದ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಐದು ಸಿಂಹಗಳು ಬಲಿಯಾಗಿವೆ...

90 ವರ್ಷದಲ್ಲೇ ಭೀಕರ ನೆರೆ, ಗುಜರಾತಲ್ಲಿ 5 ಸಿಂಹ ಬಲಿ
90 ವರ್ಷದಲ್ಲೇ ಭೀಕರ ನೆರೆ, ಗುಜರಾತಲ್ಲಿ 5 ಸಿಂಹ ಬಲಿ (ಸಾಂದರ್ಭಿಕ ಚಿತ್ರ)
Published On :

ನವದೆಹಲಿ/ಅಹಮದಾಬಾದ್: ಗುಜರಾತ್ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಗುಜರಾತ್‍ನ ಗುಜರಾತ್ ಮತ್ತು ಸೌರಾಷ್ಟ್ರದ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಐದು ಸಿಂಹಗಳು ಬಲಿಯಾಗಿವೆ.

ಅಮ್ರೇಲಿ ಮತ್ತು ಭವನಗರ ಜಿಲ್ಲೆಗಳ ಕಾಡುಗಳಲ್ಲಿ ಒಟ್ಟು ಐದು ಸಿಂಹಗಳ ಶವ ಪತ್ತೆಯಾಗಿದ್ದು ಅವುಗಳಲ್ಲೊಂದು ಮೂರು ತಿಂಗಳ ಸಿಂಹದ ಮರಿಯೂ ಸೇರಿದೆ. ಸಿಂಹಗಳಲ್ಲದೆ, ಕಾಡುಕೋಣ, ಮುಳ್ಳುಹಂದಿ, ಜಿಂಕೆಗಳು ಕೂಡ ಮೃತವಾಗಿರುವುದು ಪತ್ತೆಯಾಗಿದೆ.

ಇನ್ನೂ ಸಾವುಗಳಾಗದಂತೆ ತಡೆಯಲು ಅರಣ್ಯ ಇಲಾಖೆಯ 35 ಸಿಬ್ಬಂದಿಗಳ ಏಳುತಂಡ ಈಗಾಗಲೇ ಕಾಡುಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಅಮ್ರೇಲಿಯಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ 90 ವರ್ಷಗಳಲ್ಲೇ ಭೀಕರವಾದದ್ದು ಎಂದು ಗುಜರಾತ್ ಸರ್ಕಾರ ತಿಳಿಸಿದೆ. ನೆರೆ ಪರಿಸ್ಥಿತಿಯಿಂದಾಗಿ ಗುಜರಾತ್‍ನಲ್ಲಿ 70 ಮಂದಿ ಅಸುನೀಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.