ನಮ್ ಮಕ್ಕಳನ್ನು ಪಾಸ್ ಮಾಡ್ಬೇಡಿ
ತಮ್ಮ ಮಕ್ಕಳನ್ನು ಫೇಲ್ ಮಾಡಿದ್ಯಾಕೆ ಅಂತ ತಗಾದೆ ತೆಗೆಯುವ ಪೋಷಕರನ್ನು ಕಂಡಿದ್ದೀರಿ. ಮಕ್ಕಳಿಗೆ ಕಡಿಮೆ ಅಂಕ ಬಂದರೆ ಶಿಕ್ಷಕರ ಬಳಿ ಬಂದು ಮರುಮಾಪನಕ್ಕೆ ಗೋಗರೆಯೋದನ್ನು ನೋಡಿದ್ದೀರಿ. ಆದರೆ ನಮ್ಮ ಮಕ್ಕಳನ್ನು ದಯವಿಟ್ಟು ಪಾಸ್ ಮಾಡಬೇಡಿ ಎಂದು ಬೇಡಿಕೊಂಡಿರೋ ಪರಿಸ್ಥಿತಿ ಕೇಳಿದ್ದೀರಾ?...

ಚಂಡೀಗಡ: ತಮ್ಮ ಮಕ್ಕಳನ್ನು ಫೇಲ್ ಮಾಡಿದ್ಯಾಕೆ ಅಂತ ತಗಾದೆ ತೆಗೆಯುವ ಪೋಷಕರನ್ನು ಕಂಡಿದ್ದೀರಿ. ಮಕ್ಕಳಿಗೆ ಕಡಿಮೆ ಅಂಕ ಬಂದರೆ ಶಿಕ್ಷಕರ ಬಳಿ ಬಂದು ಮರುಮಾಪನಕ್ಕೆ ಗೋಗರೆಯೋದನ್ನು ನೋಡಿದ್ದೀರಿ. ಆದರೆ ನಮ್ಮ ಮಕ್ಕಳನ್ನು ದಯವಿಟ್ಟು ಪಾಸ್ ಮಾಡಬೇಡಿ ಎಂದು ಬೇಡಿಕೊಂಡಿರೋ ಪರಿಸ್ಥಿತಿ ಕೇಳಿದ್ದೀರಾ?
ಹರಿಯಾಣದಲ್ಲಿ ಇಂಥದೊಂದು ಅಪರೂಪ ಪದ ಇತಿಹಾಸ ನಿರ್ಮಿಸಿದೆ. ಒಬ್ಬಿಬ್ಬರಲ್ಲ. ಸುಮಾರು 30ಸಾವಿರ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಬಾರದೆಂದು ಶಾಲೆಗಳಿಗೆ ಮನವಿ ಮಾಡಿಕೊಂಡಿರುವ ಅಚ್ಚರಿಯ ಬೆಳವಣಿಗೆ ಹರಿಯಾಣದಲ್ಲಿ ನಡೆದಿದೆ. ಇದಕ್ಕೆಲ್ಲ ಕಾರಣ ತಮ್ಮ ಮಕ್ಕಳು ಪಾಸ್ ಆಗುತ್ತಿದ್ದರೂ ಇಂಗ್ಲಿಷ್ ಮಾತ್ರ ಓದೋಕೂ ಬರೆಯೋಕೂ ಬರೋಲ್ಲ ಎಂಬ ಬೇಸರ!
ಪಂಜಾಬ್‍ನಲ್ಲಿ ಇಂಗ್ಲಿಷ್ ಬರೆಯಲು ಓದಲು ಬರೋದಿಲ್ಲ ಎಂಬ ಕಾರಣಕ್ಕೆ ವೀಸಾ ಅರ್ಜಿ ತಿರಸ್ಕೃತವಾಗುತ್ತಿದೆ. ಇಂಗ್ಲಿಷ್ ಕಲಿಸಲೆಂದು ನಾಯಿಕೊಡೆಗಳಂತೆ ಪಂಜಾಬ್‍ನ ಎಲ್ಲೆಡೆ ಸ್ಪೀಕಿಂಗ್ ಕೋರ್ಸ್‍ಗಳಾಗಿವೆ. ಈ ವರ್ಷ ಪಂಜಾಬ್ ಬೋರ್ಡ್‍ನ ಮೆಟ್ರಿಕ್ ಪರೀಕ್ಷೆಯಲ್ಲಿ 80ಸಾವಿರ ವಿದ್ಯಾರ್ಥಿಗಳು ಇಂಗ್ಲಿಷ್‍ನಲ್ಲಿ ಫೇಲ್. 30ಸಾವಿರ ಮಂದಿ ಪಂಜಾಬಿಯಲ್ಲಿ ಅನುತ್ತೀರ್ಣ ಆರ್‍ಟಿಇಯಿಂದಾಗಿ 14 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ.15ರಷ್ಟು ಮಂದಿ ಸುಖಾಸುಮ್ಮನೆ ಪಾಸ್ ಆಗಿದ್ದಾರೆ.
ಹಕ್ಕು ತಂದ ಸಂಕಟ:
ಶಿಕ್ಷಣ ಹಕ್ಕು (ಆರ್‍ಟಿಇ) ಕಾಯ್ದೆಯ ಅನ್ವಯ 9ನೇತರಗತಿಯವರೆಗೂ ಫೇಲ್ ಮಾಡುವಂತಿಲ್ಲ ಎಂಬ ನಿಯಮವಿರುವುದರಿಂದ, ತಮ್ಮ ಮಕ್ಕಳು ಯಾವ ವಿಷಯದಲ್ಲೂ ಸಮರ್ಥರಲ್ಲದಿದ್ದರೂ ಪಾಸ್ ಮಾಡಿ ಮುಂದಿನ ತರಗತಿಗೆ ತಳ್ಳಲಾಗುತ್ತಿದೆ. ಈ ನಿಯಮ ಮಕ್ಕಳು ನಿಜಕ್ಕೂ ವಿದ್ಯಾವಂತರಾಗುವುದಕ್ಕೆ ಮುಳುವಾಗುತ್ತಿದೆ. ಶಿಕ್ಷಕರೂ ಕೂಡ
ಮಕ್ಕಳಿಗೆ ಸರಿಯಾದ ಪಾಠ ಮಾಡದೆಯೇ ಪಾಸ್ ಮಾಡಿ ಕಳಿಸುತ್ತಿಜ್ಜಾರೆ ಎಂಬುದು ಪೋಷಕರ ಆತಂಕಭರಿತ ಆಕ್ರೋಶ. ಕೆಲವರಂತೂ ಇನ್ನೊಂದು ವಾರದೊಳಗಾಗಿ ತಮ್ಮ ಮಕ್ಕಳನ್ನು ಫೇಲ್ ಮಾಡಿ ಹಿಂದಿನ ತರಗತಿಗೆ ಮರುಪ್ರವೇಶ ನೀಡದಿದ್ದರೆ ಪ್ರತಿಭಟನೆ ಶುರು ಮಾತುತ್ತೇವೆಂಬ ಧಮಕಿಯನ್ನು ಹಾಕಿದ್ದಾರೆ.
ಶಿಕ್ಷಕರೂ ಇಂಗ್ಲಿಷಲ್ಲಿ ಫೇಲ್!:
ಇಂಗ್ಲಿಷ್ ಯಾಕೆ ಕಬ್ಬಿಣದ ಕಡಲೆಯಾಗಿದೆ. ಶಿಕ್ಷಕರಿಂದ ಏನಾದರೂ ತಪ್ಪಾಗುತ್ತಿದೆಯೇ ಎಂದು ಪರೀಕ್ಷಿ,ಸು ಫೇಲಾದ ವಿದ್ಯಾರ್ಥಿಗಳ ಶಾಲೆಗಳ ಒಟ್ಟು 220 ಇಂಗ್ಲೀಷ್ ಶಿಕ್ಷಕರಿಗೆ ಸರಳ ಟೆಸ್ಟ್ ನೀಡಿ ನೋಡಲಾಗಿದೆ. ಅಚ್ಚರಿಯೆಂದರೆ ಅಷ್ಟೂ ಮಂದಿ ಶಿಕ್ಷಕರೂ ಆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ!. ಅಂದ ಹಾಗೆ, ಈ ಪರೀಕ್ಷೆ ನೀಡಿದ್ದು ಪಂಜಾಬ್ ನ ಶಿಕ್ಷಣ ಮಂತ್ರಿ ದಲ್ಜಿತ್ ಸಿಂಗ್ ಚೀಮಾ.
ಪೋಷಕರಿಗೆ ಮೊದಲ ಗೆಲುವು
ಈ ಎಲ್ಲ ಬೆಳವಣಿಗೆ ಗಮನಿಸಿ ಸಮೀಕ್ಷೆ ನಡೆಸಿ ಬೆಚ್ಚಿದ ಪಂಜಾಬ್ ಸರ್ಕಾರ, ಹತ್ತು ದಿನಗಳೊಳಗಾಗಿ ಶಿಕ್ಷಕರಿಗಾಗಿ ಇಂಗ್ಲಿಷ್ ಕಲಿಕೆಯ ಕ್ರಾಶ್ ಕೋರ್ಸ್ ನಡೆಸಲು ಆದೇಶಿಸಿದೆ. ಇಂಗ್ಲಿಷ್ ಮತ್ತು ಪಂಜಾಬಿ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದರೂ ಮಿಕ್ಕಿರುವ ವಿಷಯಗಳಲ್ಲೂ ಶಿಕ್ಷಕರಿಗೆ ಸರಿಯಾದ ತರಬೇತಿ ನೀಡಬೇಕೆಂದು ಶಿಕ್ಷಣ ಮಂತ್ರಿ ಆದೇಶ ನೀಡಿದ್ದಾರೆ.
29ಸಾವಿರ ಶಾಲೆಗಳಿಂದ ಶಾಲೆಗೆ ಮೂರರಂತೆ ಅಭಿಪ್ರಾಯ ಸಂಗ್ರಹಿಸಲಾಗಿದೆ. 30 ಸಾವಿರ ಪೋಷಕರು ಸರಿಯಾಗಿ ಕಲಿಸದೆ ತಮ್ಮ ಮಕ್ಕಳನ್ನು ಪಾಸ್ ಮಾಡಬೇಡಿ ಎಂದೇ ತಿಳಿಸಿದ್ದಾರೆ.
-ದೀಪಕ್ ಗೋಸ್ವಾಮಿ, ಪ್ರಾಥಮಿಕ ಶಿಕ್ಷಣ ಸಂಘದ ಕಾರ್ಯದರ್ಶಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


