ವೆಬ್ ಕ್ಯಾಮ್ ಲೈವ್ ಚಾಟ್ ನಿಮ್ಮ ಜೀವನವನ್ನೇ ಹಾಳು ಮಾಡಬಹುದು - ಈ ವಿಡಿಯೋ ನೋಡಿ
ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಯಾವ ಮಟ್ಟಿಗೆ ವೆಬ್ ಕ್ಯಾಮ್ ಲೈವ್ ಚಾಟ್ ಗೀಳು ಹತ್ತಿಕೊಂಡಿವೆ ಎಂದರೆ...

ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಯಾವ ಮಟ್ಟಿಗೆ ವೆಬ್ ಕ್ಯಾಮ್ ಲೈವ್ ಚಾಟ್ ಗೀಳು ಹತ್ತಿಕೊಂಡಿವೆ ಎಂದರೆ, ಅವರು ವಾಸ್ತವದ ಪರಿವೇ ಇಲ್ಲದೆ ತಮ್ಮ ಮಾನವನ್ನು ತಾವೇ ಹರಾಜು ಮಾಡಿಕೊಳ್ಳುವಷ್ಟು ಮುಂದುವರಿಯುತ್ತಾರೆ.
ನಿಮ್ಮ ಗೆಳೆಯನೊಂದಿಗಿನ ಸುದೀರ್ಘ ವೆಬ್ ಕ್ಯಾಮ್ ಲೈವ್ ಚಾಟ್ ನಿಮ್ಮ ಜೀವನವನ್ನು ಹೇಗೆ ಹಾಳುಗೆಡವಬಹುದು ಎಂಬುದಕ್ಕೆ ಪ್ರತ್ಯೇಕ್ಷ ಸಾಕ್ಷಿ ಈ ವಿಡಿಯೋ ನೋಡಿದಾಗ ನಿಮಗೆ ತಿಳಿಯುತ್ತದೆ.
ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂಡಿ ವೈರಲ್ ಎಂಬ ಯೂಟ್ಯೂಬ್ ಚಾನಲ್, ಕಳೆದ ಜೂನ್ 22 ರಂದು ಈ ವಿಡಿಯೋ ಬಿಡುಗಡೆ ಮಾಡಿದ್ದು, ಕಳೆದ ನಾಲ್ಕು ದಿನಗಳಲ್ಲಿ ಸರಿಸುಮಾರು 24 ಲಕ್ಷ 79 ಸಾವಿರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಯುವತಿಯೊಬ್ಬಳು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿರುತ್ತಾಳೆ. ಈ ವಿಚಾರ ತಿಳಿದ ಆಕೆಯ ಬಾಯ್ ಫ್ರೆಂಡ್ ಅಸಮಾಧಾನಗೊಂಡಿರುತ್ತಾನೆ. ಇದೇ ವಿಚಾರವಾಗಿ ಇಬ್ಬರು ವೆಬ್ ಕ್ಯಾಮ್ ಲೈವ್ ಚಾಟ್ ನಲ್ಲಿ ಮಾತನಾಡುತ್ತಿರುವಾಗ ಆಕೆಯ ಬಾಯ್ ಫ್ರೆಂಡ್ ತನ್ನ ಕೋಪದ ಶಮನಕ್ಕಾಗಿ ನಗ್ನಳಾಗುವಂತೆ ನಲ್ಲೆಯನ್ನು ಪ್ರೇರೇಪಿಸುತ್ತಾನೆ.
ಗೆಳೆಯನ ಕೋಪ ಶಮನಕ್ಕಾಗಿ ಯುವತಿ ಒಲ್ಲದ ಮನಸಿನಿಂದ ಆಕೆಯ ಬಟ್ಟೆ ಕಳಚಿ ನಗ್ನಳಾಗುತ್ತಾಳೆ. ಇದನ್ನು ವಿಡಿಯೋ ಮಾಡಿಕೊಂಡ ಆಕೆಯ ಬಾಯ್ ಫ್ರೆಂಡ್ ಮುಂದೆ ಆಕೆಯೊಂದಿಗೆ ಜಗಳ ಮಾಡಿಕೊಂಡಾಗ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿ ತನ್ನ ದ್ವೇಷ ತೀರಿಸಿಕೊಳ್ಳುತ್ತಾನೆ. ಈ ವಿಡಿಯೋ ಮುಂದೆ ಅಶ್ಲೀಲ ವೆಬ್ ಸೈಟ್ ಗಳ ಪಟ್ಟಿ ಸೇರುತ್ತದೆ.
ಇಂತಹ ಪ್ರಕರಣಗಳು ಯುವತಿಯ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂದರೆ ಉದ್ಯೋಗಸ್ಥ ಮಹಿಳೆಯಾಗಿದ್ದರೆ ಆಕೆ ಕೆಲಸ ಕಳೆದುಕೊಂಡಿರುವ ಸಂಭವಗಳು ನಮ್ಮ ಕಣ್ಣ ಮುಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


