ಕೇರಳ ಆಯುರ್ವೇದ ಉತ್ಪನ್ನಗಳ ರಾಯಭಾರಿಯಾಗಿ ಸ್ಟೆಫ್ಫಿ ಗ್ರಾಫ್ ನೇಮಕ
ಟೆನ್ನಿಸ್ ದಂತಕತೆ ಸ್ಟೆಫ್ಪಿಗ್ರಾಫ್, ಕೇರಳ ಆಯುರ್ವೇದ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ...

ತಿರುವನಂತಪುರ: ಟೆನ್ನಿಸ್ ದಂತಕತೆ ಸ್ಟೆಫ್ಪಿಗ್ರಾಫ್, ಕೇರಳ ಆಯುರ್ವೇದ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಹೇಳಿದ್ದಾರೆ,
ಕೇರಳ ಭೇಟಿ ಯೋಜನೆಯಡಿ ಕೇರಳ ಪ್ರವಾಸೋದ್ಯಮ ಇಲಾಖೆ ಸ್ಟೆಫ್ಪಿಗ್ರಾಫ್ ಅವರನ್ನು ಆಯುರ್ವೇದ ಉತ್ಪನ್ನಗಳ ರಾಯಭಾರಿಯನ್ನಾಗಿ ನೇಮಕ ಮಾಡಿದ್ದು, ಶೀಘ್ರವೇ ಅವರಿಂದ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗುವುದು ಎಂದು ಚಾಂಡಿ ತಿಳಿಸಿದ್ದಾರೆ.
ಹೀಗಾಗಲೇ ಪ್ರವಾಸೋದ್ಯಮ ಇಲಾಖೆ ಜರ್ಮನಿ ಆಟಗಾರ್ತಿ ಸ್ಟೆಫ್ಪಿಗ್ರಾಫ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಒಪ್ಪಂದದ ಬಗ್ಗೆ ಅವರಿಗೆ ವಿವರಿಸಲಾಗಿದೆ ಎಂದು ಹೇಳಿದರು.
ಟೆನ್ನಿಸ್ ನಲ್ಲಿ 22 ಗ್ರಾಂಡ್ ಸ್ಲಾಮ್ ಗಳನ್ನು ಪಡೆದುಕೊಂಡಿರುವ 46 ವರ್ಷದ ಸ್ಟೆಫ್ಪಿಗ್ರಾಫ್1999 ರಲ್ಲಿ ಟೆನ್ನಿಸ್ ನಿಂದ ನಿವೃತ್ತಿಯಾದರು, ನಂತರ 2001 ಅಕ್ಟೋಬರ್ ನಲ್ಲಿ ವಿಶ್ವದ ನಂಬರ್.1 ಟೆನ್ನಿಸ್ ಆಟಗಾರ ಆಂಡ್ರೆ ಆಗಾಸೆ ಅವರನ್ನು ವಿವಾಹವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


