ಮೋದಿ ಸರ್ಕಾರದಿಂದ 4,300 ಪಾಕ್, ಅಪ್ಘಾನ್ ಹಿಂದೂಗಳಿಗೆ ಭಾರತೀಯ ಪೌರತ್ವ?
ಈವರೆಗೂ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದಲ್ಲಿದ್ದ 4,300 ಹಿಂದೂ ಹಾಗೂ ಸಿಖ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.

ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಮತೆ ವಿವಿಧ ದೇಶಗಳಲ್ಲಿರುವ ನಿರಾಶ್ರಿತ ಹಿಂದೂಗಳಿಗೆ ಭಾರತದ ಪೌರತ್ವ ಹಾಗೂ ಪುನರ್ವಸತಿ ಕೊಡುವುದಾಗಿ ಚುನಾವಣೆಗೂ ಮುನ್ನ ಬಿಜೆಪಿ ಘೋಷಿಸಿತ್ತು. ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈವರೆಗೂ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದಲ್ಲಿದ್ದ 4 ,300 ಹಿಂದೂ ಹಾಗೂ ಸಿಖ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.
ಆದರೆ ಈ ಬಗ್ಗೆ ಆರ್.ಟಿ.ಐ ದಾಖಲೆಗಳೇ ಬೇರೆ ರೀತಿಯಾದ ಅಂಕಿ ಅಂಶ ನೀಡುತ್ತಿದೆ. ಗೃಹ ಸಚಿವಾಲಯವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿರುವ ನಿರಾಶ್ರಿತ ಹಿಂದೂ, ಸಿಖ್ ಸಮುದಾಯದ ಒಟ್ಟು 611 ಜನರಿಗೆ ಮಾತ್ರ ಭಾರತದ ಪೌರತ್ವ ದೊರೆತಿದೆ. 2014 ರಲ್ಲಿ 515 ಜನರಿಗೆ ಪೌರತ್ವ ದೊರೆತಿದ್ದರೆ ಜೂನ್ ನ ಕಳೆದವಾರದಲ್ಲಿ ಕೇವಲ 150 ಜನರಿಗೆ ಮಾತ್ರ ಭಾರತದ ನಾಗರಿಕತ್ವ ಸಿಕ್ಕಿದೆ.
4 ,300 ಜನರಿಗೆ ಭಾರತೀಯ ನಾಗರಿಕತ್ವ ದೊರೆತಿದೆ ಎಂದು ವರದಿ ಪ್ರಕಟಿಸಿದ್ದ ಸುದ್ದಿ ಸಂಸ್ಥೆ ಇದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಕ್ರಮದ ಪರಿಣಾಮ ಎಂದು ಬರೆದಿತ್ತು. ಆದರೆ ಅದೇ ರಾಜನಾಥ್ ಸಿಂಗ್ ಅವರ ಸಚಿವಾಲಯ ಸುದ್ದಿ ಸಂಸ್ಥೆ ನೀಡಿರುವ ಮಾಹಿತಿಗಿಂತಲೂ ಭಿನ್ನವಾದ ಮಾಹಿತಿ ನೀಡಿದ್ದು ಈವರೆಗೂ ಕೇವಲ 611 ಜನ ನಿರಾಶ್ರಿತರಿಗೆ ಮಾತ್ರ ಭಾರತ ಸರ್ಕಾರ ಇಲ್ಲಿನ ಪುರತ್ವ ನೀಡಿದೆ ಎಂದು ಹೇಳಿದೆ. ವಿನೋದ್ ಎಂಬುವವರು ಆರ್.ಟಿ.ಐ ಅರ್ಜಿಯಿಂದ ಈ ಅಂಕಿ ಅಂಶ ಬಹಿರಗವಾಗಿದ್ದು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ 25 ಬೇರೆ ಬೇರೆ ರಾಷ್ಟ್ರಗಳಲ್ಲಿದ್ದ ನಿರಾಶ್ರಿತ ಹಿಂದೂಗಳಿಗೆ ಈ ವರೆಗೂ ಪೌರತ್ವ ನೀಡಲಾಗಿದೆ ಎಂದು ತಿಳಿದುಬಂದಿದೆ. ಯುಕೆ, ಯು.ಎಸ್, ನೆದರ್ ಲ್ಯಾಂಡ್, ಜರ್ಮನಿ, ಕೆನಡಾ, ಬಾಂಗ್ಲಾ ದೇಶ, ಚೀನಾ, ಇಟಾಲಿ, ಕೀನ್ಯಾ ಹಾಗೂ ಲಿಬಿರಿಯಾ ದೇಶದಲ್ಲಿದ್ದ ಹಿಂದೂಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


