ಯೋಗ ದಿನಕ್ಕೆ ಅಮೆರಿಕ ಚಾಲನೆ
ಅಮೆರಿಕದಲ್ಲಿ ಯೋಗ ದಿನ ಉದ್ಘಾಟನೆ ಕುರಿತು ಅಲ್ಲಿನ ಸಂಸತ್‍ನಲ್ಲಿ ನಿರ್ಣಯ ಮಂಡಿಸಿದ ಕಾಂಗ್ರೆಸ್ ಸದಸ್ಯೆ ಗಬಾರ್ಡ್, ಈ ದಿನವನ್ನು ಶ್ಲಾಘಿಸಿದ್ದಾರೆ...

ವಾಷಿಂಗ್ಟನ್: ಅಮೆರಿಕದಲ್ಲಿ ಯೋಗ ದಿನ ಉದ್ಘಾಟನೆ ಕುರಿತು ಅಲ್ಲಿನ ಸಂಸತ್‍ನಲ್ಲಿ ನಿರ್ಣಯ ಮಂಡಿಸಿದ ಕಾಂಗ್ರೆಸ್ ಸದಸ್ಯೆ ಗಬಾರ್ಡ್, ಈ ದಿನವನ್ನು ಶ್ಲಾಘಿಸಿದ್ದಾರೆ.
ನಿರ್ಣಯ ಮಂಡಿಸುವುದಕ್ಕೆ ಮೊದಲು ಮಾತನಾಡಿದ ಅವರು, ನಾನು ಯೋಗ ಪಟುವಾಗಿದ್ದು ಆದರಿಂದ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ಸಾಕ್ಷಾತ್ ಅನುಭವಿಸಿದ್ದೇನೆ. ಈ ನಿರ್ಣಯ ಮಂಡಿಸುವ ಅವಕಾಶ ನನಗೆ ಸಿಕ್ಕಿರುವುದಕ್ಕೆ ನನಗೆ ಹೆಮ್ಮೆ ಎನಿಸಿದೆ ಎಂದರು.
ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ವಿಶ್ವಸಂಸ್ಥೆ ಘೋಷಿಸಿದ ಮಹತ್ವವನ್ನು ಸ್ಮರಿಸಲಾಯಿತು. ನಿರ್ಣಯ ಮೇಲೆ ಮಾತನಾಡಿದ ಹಲವು ಸದಸ್ಯರು ವಿಶ್ವಸಂಸ್ಥೆಯಲ್ಲಿ ಈ ನಿರ್ಣಯ ಕೈಗೊಳ್ಳುವಾಗ ವಿವಿಧ ದೇಶಗಳ ಪ್ರಧಾನ ಮಂತ್ರಿಗಳು ಹೇಳಿದ ನುಡಿಗಳನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಸದಸ್ಯರಾದ ಮೈಕೆಲ್, ಸ್ಟೀವ್ ಇಸ್ರೇಲ್, ಜಾನ್ ಲೂಯಿಸ್, ಟಿಮ್ ರ್ಯಾನ್, ರಿಕ್ ಲಾರ್ಸೆನ್, ಜಿಮ್ ಮೆಕ್‍ಡೆರ್ಮಾಟ್, ಜೋ ಕ್ರೌಡ್ಲಿ ಮತ್ತು ಆಡಂ ಸ್ಮಿತ್ ನಿರ್ಣಯದ ಮೇಲೆ ಮಾತನಾಡಿದರು. ಅಂತಾರಾಷ್ಟ್ರೀಯ ಯೋಗ ದಿನಕ್ಕೆ 177 ದೇಶಗಳು ಬೆಂಬಲಿಸಿವೆ. ಜಗತ್ತಿನಾದ್ಯಂತ 25 ಕೋಟಿಗೂ ಹೆಚ್ಚು ಜನ ಅಂದು ಯೋಗ ಮಾಡಲಿದ್ದಾರೆ ಎಂದು ಗಬಾರ್ಡ್ ಹೇಳಿದರು.
2014ರ ಸೆಪ್ಟೆಂಬರ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತದ ಪ್ರಾಚೀನ ಸಂಪ್ರದಾಯವಾಗಿರುವ ಈ ಯೋಗ ಮೌಲ್ಯಕಟ್ಟಲಾಗದಂತಹ ಕೊಡುಗೆಯಾಗಿದೆ ಎಂದು ಬಣ್ಣಿಸಿದ್ದಾಗಿ ಗಬಾರ್ಡ್ ಹೇಳಿದರು. ಯೋಗ ಮನಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆಯನ್ನು ಒಗ್ಗೂಡಿ ಸಲಿದೆ. ಸಂಯಮ ತರಲಿದೆ, ಮನುಷ್ಯ ಮತ್ತು ಪ್ರಕೃತಿ ನಡುವೆ ಸೌಹಾರ್ದ ಮೂಡಿಸಲಿದೆ. ಒಟ್ಟಾರೆ ಮನುಷ್ಯನ ಆರೋಗ್ಯವನ್ನು ಸರ್ವರೀತಿಯಿಂದಲೂ ಪರಿಣಾಮ ಬೀರಲಿದೆ. ಯೋಗ ಕೇವಲ ಆಸನಗಳ ಅಭ್ಯಾಸವಲ್ಲ ಅದಕ್ಕೆ ಬದಲಾಗಿ ವ್ಯಕ್ತಿಯ ದೇಹದೊಳಗೆ, ಜಗತ್ತು ಮತ್ತು ಪ್ರಕೃತಿಯಲ್ಲಿ ಲೀನವಾಗುವ ಕ್ರಿಯೆಯಾಗಿದೆ ಗಬಾರ್ಡ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


