ದೇಶ

ಮುಸ್ಲಿಂ ಬಾಲಕಿಯರಿಂದ ಅಮಿತ್ ಶಾಗೆ ಯೋಗ ಪಾಠ!

ಆದರೆ ಯಾವ ಸಮುದಾಯದಿಂದ ವಿರೋಧ ಬಂದಿತ್ತೋ ಅದೇ ಸಮುದಾಯದ ಇಬ್ಬರು ಬಾಲಕಿಯರು ಯೋಗ ಕಲಿಸಲಿದ್ದಾರೆ...

Published On :

ಪಾಟ್ನಾ: ಕೇಂದ್ರ ಸರ್ಕಾರ ' ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ'ಗೆ ಯಾವಾಗ ಕರೆ ನೀಡಿತ್ತೋ ಅಂದಿನಿಂದ ವಿವಾದ ಆರಂಭವಾಗಿತ್ತು. ಮುಸಲ್ಮಾನ ಅಲ್ಪಸಂಖ್ಯಾತ ಗುಂಪಿನವರು ಈ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಧರ್ಮ, ಜಾತಿಯನ್ನು ಅದರಲ್ಲಿ ತಳಕು ಹಾಕಲಾಗಿತ್ತು. ಇದೀಗ ಯೋಗ ದಿನಾಚರಣೆ ನಾಳೆ ನಡೆಯಲಿದೆ. ಕೆಲವು ಮುಸ್ಲಿಂ ಗುಂಪಿನವರು ಬೆಂಬಲ ನೀಡುತ್ತಿದ್ದಾರೆ.

ಆದರೆ ಯಾವ ಸಮುದಾಯದಿಂದ ವಿರೋಧ ಬಂದಿತ್ತೋ ಅದೇ ಸಮುದಾಯದ ಇಬ್ಬರು ಬಾಲಕಿಯರು ಯೋಗ ಕಲಿಸಲಿದ್ದಾರೆ. ಬಿಹಾರ ಮೂಲದ ರೇಷ್ಮಾ ಖತೂನ್ ಮತ್ತು ಬಿಸ್ಮಿಲ್ಲಾ  ಖತೂನ್ ಎಂಬ ಮುಸ್ಲಿಂ ಸಹೋದರಿಯರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೆಲ ಕೇಂದ್ರ ಸಚಿವರಿಗೆ ನಾಳೆ ಪಾಟ್ನಾದ ಮೊಯ್ನುಲ್ ಹಕ್ ಸ್ಟೇಡಿಯಂನಲ್ಲಿ ಯೋಗ ಪಾಠ ಮಾಡಲಿದ್ದಾರಂತೆ.

''ನಾನು ಸೂರ್ಯ ನಮಸ್ಕಾರದಿಂದ ಯೋಗ ಆರಂಭಿಸುತ್ತೇನೆ. ನಂತರ ಪ್ರಾಣಾಯಾಮ, ನಂತರ ಉಳಿದ ಆಸನಗಳನ್ನು ಅಮಿತ್ ಶಾ ಅವರಿಗೆ ಹೇಳಿಕೊಡುತ್ತೇನೆ'' ಎನ್ನುತ್ತಾಳೆ ರೇಷ್ಮಾ ಖತೂನ್.

'' ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇರುತ್ತಾರೆ. ಅವರಿಗೆ ಯೋಗ ಹೇಳಿಕೊಡಬೇಕೆನ್ನುವುದು ನನ್ನ ಆಸೆ ಎನ್ನುತ್ತಾಳೆ 10ನೇ ತರಗತಿಯ ಬಿಸ್ಮಿಲ್ಲಾ  ಖತೂನ್.

2012ರಿಂದ ರೇಷ್ಮಾ ಯೋಗ ಕಲಿಯುತ್ತಿದ್ದರೆ, ಬಿಸ್ಮಿಲ್ಲಾ 2010ರಿಂದ ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ.  'ಮುಂದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ  ' ಅವರಿಗೆ ಯೋಗ ಹೇಳಿಕೊಡುವುದು ಈ ಇಬ್ಬರು ಬಾಲಕಿಯರ ಅಭಿಲಾಷೆಯಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.