'ಯೋಗ' ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಕೃತಿಯಲ್ಲಿದೆ: ಉಪ ಕುಲಪತಿ
ವಿಶ್ವವಿದ್ಯಾಲಯದ ಸಂಸ್ಕೃತಿಯಲ್ಲಿ ಯೋಗವು ಆಳವಾಗಿ ಬೇರುಬಿಟ್ಟಿದೆ ಎಂದು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಉಪ ಕುಲಪತಿ ಜಮೀರ್ ಉದ್ದಿನ್ ಶಾ ಹೇಳಿದ್ದಾರೆ...

ಆಲಿಘಡ: ವಿಶ್ವವಿದ್ಯಾಲಯದ ಸಂಸ್ಕೃತಿಯಲ್ಲಿ ಯೋಗವು ಆಳವಾಗಿ ಬೇರುಬಿಟ್ಟಿದ್ದು, ತಮ್ಮ ಮೊದಲಿನವರು ಸಹ ಕ್ಯಾಂಪಸ್ ಒಳಗೆ ಯೋಗಾಭ್ಯಾಸ ನಡೆಸುವುದಕ್ಕೆ ಪ್ರೋ ತ್ಸಾಹ ನೀಡುತ್ತಿದ್ದರು ಎಂದು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಉಪ ಕುಲಪತಿ ಜಮೀರ್ ಉದ್ದಿನ್ ಶಾ ಹೇಳಿದ್ದಾರೆ.
''ನಾನು ಕಳೆದ 40 ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ನನಗೆ ಬಹಳ ಸಹಾಯವಾಗಿದೆ. ವಿಶ್ವವಿದ್ಯಾಲಯದಲ್ಲಿಯೂ ಈ ಸಂಸ್ಕೃತಿ ಇದ್ದು, ಮಾಜಿ ಕುಲಪತಿಗಳು ಸಹ ಯೋಗಾಭ್ಯಾಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಪ್ರಾಚೀನ ಪದ್ಧತಿಯಾದ ಯೋಗಾಭ್ಯಾಸವನ್ನು ದೇಹ ಮತ್ತು ಮನಸ್ಸುಗಳ ಆರೋಗ್ಯವೃದ್ಧಿಗಾಗಿ ಸ್ವ ಇಚ್ಚೆಯಿಂದ ಮಾಡಬೇಕೇ ಹೊರತು ಯಾರೂ ಬಲವಂತ ಮಾಡಬಾರದು. ಯಾವುದೇ ವ್ಯಕ್ತಿ ಅಥವಾ ವರ್ಗದ ಮೇಲೆ ಬಲವಂತವಾಗಿ ಹೇರಿದರೆ ವಿರುದ್ಧವಾಗುತ್ತದೆ. ಅದು ಯಾವುದೇ ಧರ್ಮ, ವರ್ಗಗಳಿಗೆ ಸಂಬಂಧಿಸಿದ್ದಲ್ಲ. ನಮ್ಮ ದೇಶದ ಆಸ್ತಿ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.
ಇದೇ 21ರ ಮೊದಲ ಅಂತಾರಾಷ್ಟ್ರೀಯ ಯೋಗ ದಿನದಂದು ಅದಕ್ಕೆ ಸಂಬಂಧಿಸಿದ ಕಾರ್ಯಾಗಾರ ನಡೆಸುವಂತೆ ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಣ ವಿಭಾಗಕ್ಕೆ ಸೂಚನೆ ನೀಡಲಾಗಿದೆ. ಈಗ ವಿವಿಯಲ್ಲಿ ಬೇಸಿಗೆ ರಜಾ ಸಮಯವಾಗಿರುವುದರಿಂದ ಎಲ್ಲರೂ ಭಾಗವಹಿಸಬಹುದೆಂಬ ನಿರೀಕ್ಷೆಯಿಲ್ಲ ಎಂದು ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ವಿಶ್ವಕ್ಕೆ ಶಾಂತಿಯ ಸಂದೇಶ ಸಾರುವುದು. ಮನುಷ್ಯರ ನಡುವೆ ಸಂಬಂಧ ಬೆಸೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'' ಯೋಗ ಮತ್ತು ಧಾರ್ಮಿಕತೆ'' ಕುರಿತು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ದೇಶ ಮಟ್ಟದಲ್ಲಿ ಸೆಮಿನಾರ್ ನ್ನು ಆಯೋಜಿಸಿದ್ದು, ಅದರಲ್ಲಿ ಮಾಜಿ ಸಚಿವ ಮತ್ತು ರಾಜ್ಯಸಭಾ ಸದಸ್ಯ ಕರಣ್ ಸಿಂಗ್ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


