ಗವರ್ನರ್ ಕಾರ್ಯವೈಖರಿ ಬಗ್ಗೆ ಆಂಧ್ರ ಸಿಎಂ ಅಸಮಾಧಾನ, ವರ್ಗಾವಣೆಗೆ ಪಟ್ಟು
ಆಂಧ್ರಪ್ರದೇಶ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರ ಕಾರ್ಯವೈಖರಿ ಬಗ್ಗೆ, ವಿಶೇಷವಾಗಿ ನೋಟಿಗಾಗಿ ಓಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ...

ಹೈದರಾಬಾದ್: ಆಂಧ್ರಪ್ರದೇಶ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರ ಕಾರ್ಯವೈಖರಿ ಬಗ್ಗೆ, ವಿಶೇಷವಾಗಿ ನೋಟಿಗಾಗಿ ಓಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ತೀವ್ರ ಅಸಮಾಧಾನ ವ್ಯಕ್ಯಪಡಿಸಿದ್ದಾರೆ.
ನೋಟಿಗಾಗಿ ಓಟು ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ನಡುವಿನ ಜಟಾಪಟಿ ಮತ್ತಷ್ಟು ತೀವ್ರಗೊಂಡಿರುವ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರು, ರಾಜ್ಯಪಾಲ ನರಸಿಂಹನ್ ಅವರನ್ನು ಬೆರೆಕಡೆ ವರ್ಗಾ ಮಾಡಿ, ಒಪ್ಪಿಗೆಯಾಗುವಂತಹ ಹಾಗೂ ಆಂಧ್ರ ಮತ್ತು ತೆಲಗಾಂಣ ಎರಡೂ ರಾಜ್ಯಗಳ ಮಧ್ಯೆ ಶಾಂತಿ ನೆಲೆಸುವಂತೆ ಮಾಡುವ ವ್ಯಕ್ತಿಯನ್ನು ನೇಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ನಾಯ್ಡು ಅವರು ನೋಟಿಗಾಗಿ ಓಟು ಹಾಗೂ ತೆಲಂಗಾಣ ಸರ್ಕಾರದಿಂದ ಆಂಧ್ರ ಸಚಿವರ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ರಾಜ್ಯಪಾಲರು ವ್ಯವಹರಿಸಿದ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
'ನಾವು ಎಲ್ಲಾ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆ ತರುತ್ತಿದ್ದೇವೆ. ಅಲ್ಲದೆ ತಾರತಮ್ಯ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಆದರೂ ಅವರು ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳ ವಿಚಾರದಲ್ಲಿ ಒಂದೇ ರೀತಿಯಾಗಿ ನಡೆದುಕೊಳ್ಳುತ್ತಿಲ್ಲ' ಎಂದು ನಾಯ್ಡು ಹೇಳಿದ್ದಾರೆ.
ಈ ಮಧ್ಯೆ, ತಮ್ಮ ಹಾಗೂ ತಮ್ಮ ಸಚಿವ ಸಂಪುಟ ಸದಸ್ಯರ ರಕ್ಷಣೆಗಾಗಿ ಎರಡೂ ರಾಜ್ಯಗಳ ರಾಜಧಾನಿಯಾಗಿರುವ ಹೈದರಾಬಾದ್‌ನಲ್ಲಿ ಆಂಧ್ರ ಪೊಲೀಸರನ್ನು ನಿಯೋಸುವ ನಾಯ್ಡು ಅವರ ತೀರ್ಮಾನ ಮಾಡಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯಪಾಲ ನರಸಿಂಹನ್ ಅವರು ಆಂಧ್ರ ಮುಖ್ಯ ಕಾರ್ಯದರ್ಶಿ ಐ.ವೈ.ಆರ್ ಕೃಷ್ಣರಾವ್ ಮತ್ತು ಡಿಜಿಪಿ ಜೆ.ವಿ.ರಾಮುಡು ಅವರಿಂದ ಮಾಹಿತಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


