ದೇಶ

ಪಪ್ಪು ಯಾದವ್ ವಿರುದ್ಧ ಗಗನಸಖಿಗೆ ಚಪ್ಪಲಿಯಿಂದ ಹೊಡೆಯುವ ಬೆದರಿಕೆ ಆರೋಪ

ಆರ್‌ಜೆಡಿಯ ಉಚ್ಛಾಟಿತ ಸಂಸದ ಪಪ್ಪು ಯಾದವ್‌ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿದ್ದಾರೆ ಎಂದು ಜೆಟ್‌ ಏರ್‌ವೇಸ್‌...

ಪಪ್ಪು ಯಾದವ್ ವಿರುದ್ಧ ಗಗನಸಖಿಗೆ ಚಪ್ಪಲಿಯಿಂದ ಹೊಡೆಯುವ ಬೆದರಿಕೆ ಆರೋಪ
ಪಪ್ಪು ಯಾದವ್
Published On :

ನವದೆಹಲಿ: ಆರ್‌ಜೆಡಿಯ ಉಚ್ಛಾಟಿತ ಸಂಸದ ಪಪ್ಪು ಯಾದವ್‌ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿದ್ದಾರೆ ಎಂದು ಜೆಟ್‌ ಏರ್‌ವೇಸ್‌ ವಿಮಾನದ ಗಗನಸಖಿಯೊಬ್ಬರು ದೂರು ನೀಡಿದ್ದಾರೆ.

ಪಟ್ನಾದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಪಪ್ಪು ಯಾದವ್‌ ಪ್ರಯಾಣಿಸುತ್ತಿದ್ದರು. ಪ್ರಯಾಣದ ಆರಂಭದಿಂದಲೇ ಪಪ್ಪು ಯಾದವ್‌ ಅನುಚಿತವಾಗಿ ವರ್ತಿಸುತ್ತಿದ್ದರು.

ವಿಮಾನ ಪ್ರಯಾಣದ ಸುರಕ್ಷಾ ಮಾರ್ಗಸೂಚಿಗಳನ್ನೂ ಅವರು ಅನುಸರಿಸುತ್ತಿರಲಿಲ್ಲ. ಚೆಲ್ಲಿದ ತಿನಿಸು ಶುಚಿಗೊಳಿಸುವಂತೆ ಕಾಲಿನಿಂದ ತೋರಿಸಿದರು. ಈ ಕೆಲಸವನ್ನು ಗಗನಸಖಿಯರೇ ಮಾಡಬೇಕು. ಒಂದು ವೇಳೆ ತಾವು ಹೇಳಿದ ಕೆಲಸವನ್ನು ಮಾಡದಿದ್ದರೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿ ನನ್ನನ್ನು ಎಳೆದಾಡಿದರು ಎಂದು ಗಗನಸಖಿ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.