ಕಾಂಪ್ಲಾನ್ ಪ್ಯಾಕ್ ನಲ್ಲಿ 100 ಸತ್ತ ಕೀಟಗಳು ಪತ್ತೆ
ಮ್ಯಾಗಿ ನೂಡಲ್ಸ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧವಾದ ಬೆನ್ನಲ್ಲೇ, ಈಗ ಮತ್ತೊಂದು ಆರೋಗ್ಯ...

ಲಖನೌ: ಮ್ಯಾಗಿ ನೂಡಲ್ಸ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧವಾದ ಬೆನ್ನಲ್ಲೇ, ಈಗ ಮತ್ತೊಂದು ಆರೋಗ್ಯ ಪೇಯ ಸಂಕಷ್ಟಕ್ಕೆ ಸಿಲುಕಿದೆ.
ಕಾಂಪ್ಲಾನ್ ಪ್ಯಾಕ್ ನಲ್ಲಿ ಸತ್ತ 100 ಕೀಟಗಳು ಪತ್ತೆಯಾಗಿವೆ. ಲಖನೌನ ಮಹಾನಗರದ ನಿವಾಸಿ ತನಿಷಾ ರೌ ಸಿಂಗಾನಿಯಾ ಅವರು ಕಾಂಪ್ಲಾನ್ ಪ್ಯಾಕ್ ಓಪನ್ ಮಾಡಿ ನೋಡಿದಾಗ, ಹಾಲಿನಲ್ಲಿ ಸತ್ತ ಬಿಳಿ ಮತ್ತು ಕಪ್ಪು ಬಣ್ಣದ ಹುಳುಗಳು ಕಂಡಿವೆ. ಈ ಸಂಬಂಧ ಅವರ ಪತಿ ದೂರು ದಾಖಲಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಈ ಉತ್ಮನ್ನ ತಯಾರಿಕೆ ದಿನಾಂಕ ಫೆಬ್ರವರಿ 2,2015 ಆಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿಯು(ಎಫ್‌ಎಸ್‌ಡಿಎ) ಕಾಂಪ್ಲಾನ್ ಪ್ಯಾಕ್ ನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


