ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆ
ದೆಹಲಿ- ಲಂಡನ್ ಎ111 ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ.

ಮುಂಬಯಿ: ದೆಹಲಿ- ಲಂಡನ್ ಎ111 ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ. ಏರ್ ಇಂಡಿಯ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸ್ಪೆಷಲ್ ಊಟಕ್ಕಾಗಿ ಆರ್ಡರ್ ಮಾಡಿದ್ದರು. ನಂತರ ಗಗನಸಖಿ ಅವರಿಗೆ ವಿಮಾನದ ಅಡುಗೆ ಕೋಣೆಯಲ್ಲಿ ಇಡಲಾಗಿದ್ದ ಊಟ ತಂದು ಪ್ರಯಾಣಿಕರಿಗೆ ನೀಡಿದ್ದಾರೆ. ಊಟದ ಟ್ರೇ ಪಡೆದ ಪ್ರಯಾಣಿಕರು ಕೂಡಲೇ ಜೋರಾಗಿ ಕೂಗಿಕೊಂಡಿದ್ದಾರೆ. ಎಲ್ಲರೂ ಗಾಬರಿಯಿಂದ ಎದ್ದು ನೋಟಿದಾಗ ತಟ್ಟೆಯಲ್ಲಿದ್ದ ಬರ್ಗರ್ ಕೆಳಗಡೆ ಹಲ್ಲಿ ಹರಿಡಾದುತ್ತಿದ್ದದ್ದನ್ನು ನೋಡಿ ಪ್ರಯಾಣಿಕರು ಆಕ್ರೋಶ ಗೊಂಡಿದ್ದಾರೆ. ಇದರ ನಂತರ ಹಲವು ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಊಟ ತಿನ್ನಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈ ಸಂಬಂಧ ಏರ್ ಇಂಡಿಯಾ ವಿಮಾನದ ವಿರುದ್ಧ ಪ್ರಯಾಣಿಕರು ದೂರು ದಾಖಲಿಸಿದ್ದಾರೆ, ಆದರೆ ಇದುವರಗೆ ಏರ್ ಇಂಡಿಯಾ ಆಡಳಿತ ವರ್ಗ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ಗಾರೆ.
ಊಟ ಇಡುವ ಕೋಣೆಯಲ್ಲಿ ಸ್ವಚ್ಚತೆ ಇಲ್ಲ. ಇದರ ಬಗ್ಗೆ ಹಲವು ಬಾರಿ ಮ್ಯಾನೇಜ್ ಮೆಂಟ್ ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆಯೂ ಊಟದಲ್ಲಿ ಜಿರಳೆ ಪತ್ತೆಯಾದ ಪ್ರಕರಣ ಕೂಡ ನಡೆದಿದೆ ಎಂದು ವಿಮಾನ ಸಿಬ್ಬಂದಿ ಆರೋಪಿಸಿದ್ದಾರೆ. ವಿಮಾನಗಳಲ್ಲಿ ಈಟ ತಿನ್ನುವುದು ಎಷ್ಟು ಸೂಕ್ತ ಎಂಬುದು ಸದ್ಯದ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


