ಹಬ್ಬಕ್ಕಾಗಿ ಅಣ್ವಸ್ತ್ರ ಅಭಿವೃದ್ಧಿ ಪಡಿಸಿದ್ದಲ್ಲ: ಪಾಕ್
ಭಾರತವು ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಹೊರಟಿದೆ ಎಂದು ಆರೋಪಿಸಿರುವ ಪಾಕ್ ನ ನಿವೃತ್ತ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್...

ಇಸ್ಲಾಮಾಬಾದ್: ಭಾರತವು ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಹೊರಟಿದೆ ಎಂದು ಆರೋಪಿಸಿರುವ ಪಾಕ್ ನ ನಿವೃತ್ತ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ 'ನಮ್ಮಲ್ಲಿ ಅಣ್ವಸ್ತ್ರಗಳಿರುವುದು ದೇಶದ ರಕ್ಷಣೆಗೇ ಹೊರತು, ಹಬ್ಬಗಳ ಆಚರಣೆಗಲ್ಲ' ಎಂದಿದ್ದಾರೆ.
ನಾವು ನಮ್ಮ ಅಣ್ವಸ್ತ್ರ ಸಾಮರ್ಥ್ಯ ಪ್ರದರ್ಶಿಸಲು ಬಯಸುವುದಿಲ್ಲ. ಆದರೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆಯುಂಟಾದಾಗ ಸುಮ್ಮನಿರುವುದಿಲ್ಲ. ನಮ್ಮ ಮೇಲೆ ದಾಳಿ ನಡೆಸಬೇಡಿ, ನಮ್ಮ ಗಡಿ ಸಮಗ್ರತೆಗೆ ಸವಾಲು ಹಾಕಬೇಡಿ. ಏಕೆಂದರೆ ನಮ್ಮದು ಬೃಹತ್, ಅಣ್ವಸ್ತ್ರಶಕ್ತಿ. ನಮ್ಮನ್ನು ನಿಶ್ಶಸ್ತ್ರಿಕರಣಗೊಳಿಸುವ ಭಾರತದ ಕನಸು ಎಂದಿಗೂ ನನಸಾಗದು'' ಎಂದೂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


