ದೇಶ

ಸೋನಿಯಾ ವಿರುದ್ಧದ 1984ರ ಪ್ರಕರಣದ ವಿಚಾರಣೆಗೆ ಅಮೆರಿಕ ಮನವಿ

1984 ರ ಸಿಖ್ ನರಮೇಧ ಸಂಬಂಧಿಸಿದಂತೆ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಮೊಕದ್ದಮೆಯ ವಿಚಾರಣೆ ನಡೆಸಬೇಕೆಂದು ಅಮೆರಿಕ, ಮ್ಯಾನ್ಹಾಟನ್ ಕೋರ್ಟ್ ಗೆ ಮನವಿ ಮಾಡಿದೆ.

ಸೋನಿಯಾ ವಿರುದ್ಧದ 1984ರ ಪ್ರಕರಣದ ವಿಚಾರಣೆಗೆ ಅಮೆರಿಕ ಮನವಿ
ಸೋನಿಯಾ ಗಾಂಧಿ
Published On :

ನ್ಯೂಯಾರ್ಕ್: 1984 ರ ಸಿಖ್ ನರಮೇಧ ಸಂಬಂಧಿಸಿದಂತೆ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಮೊಕದ್ದಮೆಯ ವಿಚಾರಣೆ ನಡೆಸಬೇಕೆಂದು ಅಮೆರಿಕ, ಮ್ಯಾನ್ಹಾಟನ್ ಕೋರ್ಟ್ ಗೆ ಮನವಿ ಮಾಡಿದೆ. 

ಆಗಸ್ಟ್ 18 ಕ್ಕೆ ವಿಚಾರಣೆ ನಿಗದಿಯಾಗಿದ್ದು, ಮ್ಯಾನ್ಹಾಟನ್ ಕೋರ್ಟ್, ಸಿಖ್ಸ್ ಫಾರ್ ಜಸ್ಟಿಸ್(ಎಸ್.ಎಫ್.ಜೆ ) ದಾಖಲಿಸಿರುವ ಮೊಕದ್ದಮೆಯ ವಿಚಾರಣೆ ನಡೆಸಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧದ ಅಪರಾಧಿಗಳನ್ನು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ವಿರುದ್ಧ ಎಸ್.ಎಫ್.ಜೆ  ಯು.ಎಸ್  ನಲ್ಲಿ ಪ್ರಕರಣ ದಾಖಲಿಸಿತ್ತು.

ಹಿಂಸೆಗೆ ಒಳಗಾದ ಸಂತ್ರಸ್ತರ ರಕ್ಷಣೆ ಕಾಯ್ದೆ ಪ್ರಕಾರ ಸೋನಿಯಾ ಗಾಂಧಿ ಜವಾಬ್ದಾರರಾಗಿರುವುದಿಲ್ಲ, ಆದ್ದರಿಂದ ಫಿರ್ಯಾದುದಾರರು ಮೊಕದ್ದಮೆಯನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಅಮೆರಿಕಾದ ಫೆಡರಲ್ ನ್ಯಾಯಾಧೀಶರು  ಸೋನಿಯಾ ಗಾಂಧಿ ವಿರುದ್ಧದ ಮೊಕದ್ದಮೆಯನ್ನು  ರದ್ದುಗೊಳಿಸಿದ್ದರು. ಆದರೆ ಈಗ ಮತ್ತೊಮ್ಮೆ ವಿಚಾರಣೆ ನಡೆಯಲಿದ್ದು, ಸೋನಿಯಾ ಗಾಂಧಿ ವಿರುದ್ಧ ಮೊಕದ್ದಮೆ ದಾಖಲಿಸಿರುವ ಜಸ್ಬೀರ್ ಸಿಂಗ್ ಹಾಗೂ  ಮೊಹೇಂದರ್ ಸಿಂಗ್ ಇಬ್ಬರೂ ಸರಿಯಾದ ಫಿರ್ಯಾದುದಾರಾ ಎಂಬುದರ ಬಗ್ಗೆ ವಿಚಾರಣೆ ನಡೆಸಲಿದೆ.      

ಅಪರಾಧವನ್ನು ಮುಚ್ಚಿಡುವವರೂ ಸಹ, ಅಪರಾಧ ಮಾಡಿದವರಷ್ಟೇ ತಪ್ಪಿತಸ್ಥರಾಗುತ್ತಾರೆ ಎಂಬ ಅಂತಾರಾಷ್ಟ್ರೀಯ ನಿಯಮವನ್ನು ಮುಂದಿಟ್ಟುಕೊಂಡು ಎಸ್.ಎಫ್.ಜೆ ಸಂಘಟನೆ  ಅಮೆರಿಕಾದ ನ್ಯಾಯಾಲಯದಲ್ಲಿ ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ  ಬಳಿಕ ನಡೆದಿದ್ದ  ಸಿಖ್ ನರಮೇಧದಲ್ಲಿ ಭಾಗಿಯಾಗಿದ್ದ  ಕಾಂಗ್ರೆಸ್ ನಾಯಕರಾದ ಕಮಲ್ ನಾಥ್, ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್ ನ್ನು ರಕ್ಷಿಸಿದ್ದಾರೆ ಎಂಬ ಆರೋಪ  ಸೋನಿಯಾ ಗಾಂಧಿ ವಿರುದ್ಧ ಕೇಳಿಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.