ಮತಲಂಚ: ಶಾಸಕ ರೇವಂತ್ ರೆಡ್ಡಿಗೆ 12 ಗಂಟೆ ಜಾಮೀನು
ಮತಕ್ಕಾಗಿ ಲಂಚ ಆಮೀಷ ಹಗರಣ ಸಂಬಂಧ ಬಂಧನಕ್ಕೀಡಾಗಿರುವ ತೆಲುಗು ದೇಶಂ ಪಕ್ಷ(ಟಿಡಿಪಿ) ಶಾಸಕ ಎ. ರೇವಂತ್ ರೆಡ್ಡಿ ಅವರಿಗೆ 12 ಗಂಟೆ ಅವಧಿಗೆ ಜಾಮೀನು ಸಿಕ್ಕಿದೆ...

ಹೈದರಾಬಾದ್: ಮತಕ್ಕಾಗಿ ಲಂಚ ಆಮೀಷ ಹಗರಣ ಸಂಬಂಧ ಬಂಧನಕ್ಕೀಡಾಗಿರುವ ತೆಲುಗು ದೇಶಂ ಪಕ್ಷ(ಟಿಡಿಪಿ) ಶಾಸಕ ಎ. ರೇವಂತ್ ರೆಡ್ಡಿ ಅವರಿಗೆ 12 ಗಂಟೆ ಅವಧಿಗೆ ಜಾಮೀನು ಸಿಕ್ಕಿದೆ.
ತಮ್ಮ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಜಾಮೀನು ನೀಡುವಂತೆ ರೇವಂತ್ ರೆಡ್ಡಿ ಮನವಿ ಮಾಡಿದ್ದರು. ಇದಕ್ಕೆ ಸ್ಪರ್ಧಿಸಿದ ಸ್ಥಳೀಯ ನ್ಯಾಯಾಲಯದ 12 ಗಂಟೆಗಳ ಅವಧಿಗೆ ಜಾಮೀನು ನೀಡಿದೆ ಈ ಆದೇಶದನ್ವಯ ಗುರುವಾರ ಬೆಳಿಗ್ಗೆ 6 ಗಂಟೆಗೆ ಚೆರ್ಲಪಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಭ್ರಷ್ಟಾಚಾರದ ವಿರೋಧಿ ದಳದ ಬೆಂಗಾವಲು ಪಡೆಯ ರಕ್ಷಣೆಯಲ್ಲಿ ರೆಡ್ಡಿ ಅವರನ್ನು ಜುಬ್ಲಿ ಹಿಲ್ಸ್ ನಿವಾಸಕ್ಕೆ ಹಾಗೂ ಅಲ್ಲಿಂದ ಮಧಾಪುರನಲ್ಲಿರುವ ಸಭಾಂಗಣಕ್ಕೆ ಕೊರೆದೊಯ್ಯಲಾಗಿದ್ದು, ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಶುರುವಾಗಿದೆ.
ಎಸಿಬಿ ವಿಶೇಷ ನ್ಯಾಯಾಲಯವು ರೆಡ್ಡಿ ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ, ಪ್ರಕರಣದ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡದಂತೆ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಸಿಬ್ಬಂದಿ ಟಿಡಿಪಿ ನಾಯಕನ ಮೇಲೆ ಹದ್ದಿನ ಕಣ್ಣಿಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


