ಸೋಮವಾರದಿಂದ 'ಬ್ಲಾಕೌಟ್ ಹಂತ' ಕ್ಕೆ ಮಂಗಳಯಾನ
ಮಂಗಳಯಾನ ಇನ್ನು 15 ದಿನಗಳವರೆಗೆ ಭೂಮಿಯಿಂದ ತನ್ನ ಸಂಪರ್ಕ ಮತ್ತು ಸಂವಹನವನ್ನು ಕಡಿದುಕೊಳ್ಳುತ್ತದೆ...

ಬೆಂಗಳೂರು: ಇಸ್ರೋ ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಂಗಳಯಾನ ಇನ್ನು 15 ದಿನಗಳವರೆಗೆ ಭೂಮಿಯಿಂದ ತನ್ನ ಸಂಪರ್ಕ ಮತ್ತು ಸಂವಹನವನ್ನು ಕಡಿದುಕೊಳ್ಳುತ್ತದೆ.
ಸೂರ್ಯ ಮತ್ತು ಮಂಗಳನ ಮಧ್ಯೆ ಭೂಮಿ ಅಡ್ಡ ಬರುವುದರಿಂದ ಉಪಗ್ರಹ ತನ್ನ ಸಂಪರ್ಕ ಕಡಿದುಕೊಂಡು ಕಪ್ಪು ಹಂತಕ್ಕೆ(ಬ್ಲಾಕೌಟ್) ಪ್ರವೇಶಿಸಿ ನಿರ್ದಿಷ್ಟ ಸ್ಥಾನಕ್ಕೆ ಹೋಗಿ ಕೂರುತ್ತದೆ. ನಾಳೆಯಿಂದ(ಜೂನ್ 8) ಈ ತಿಂಗಳ 22ರವರೆಗೆ ಉಪಗ್ರಹ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧಿಕಾರಿ ತಿಳಿಸಿದ್ದಾರೆ.
ಮಂಗಳಯಾನ ನೌಕೆಯನ್ನು ಹಾರಿಸಿಬಿಟ್ಟ ನಂತರ ಇಷ್ಟೊಂದು ದೀರ್ಘ ಅವಧಿಯವರೆಗೆ ಸಂಪರ್ಕ ಕಡಿದುಕೊಳ್ಳುವುದು ಇದೇ ಮೊದಲು, ಈ ಅವಧಿಯಲ್ಲಿ ಉಹಗ್ರಹದ ಜೊತೆ ಯಾವುದೇ ಸಂವಹನ ಸಾಧ್ಯವಾಗುವುದಿಲ್ಲ. ನಂತರ,ಉಪಗ್ರಹವನ್ನು ಮತ್ತೆ ಹತೋಟಿಗೆ ತರಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷ ಮೇ ತಿಂಗಳಲ್ಲಿ ಮತ್ತೆ ಇಂತಹ ಸ್ಥಿತಿ ಉಂಟಾಗಲಿದೆ.
ಇಸ್ರೋ ಬಾಹ್ಯಾಕಾಶ ಕೇಂದ್ರ, ಕಳೆದ ವರ್ಷ ಸೆಪ್ಟೆಂಬರ್ 24ರಂದು, ಅತಿ ಕಡಿಮೆ ವೆಚ್ಚದಲ್ಲಿ ಮಂಗಳಗ್ರಹದ ಕಕ್ಷೆಗೆ ಯಶಸ್ವಿಯಾಗಿ ಉಪಗ್ರಹವನ್ನು ಕಳುಹಿಸಿತ್ತು. ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆ ಮಾಡಿತ್ತು. ಮಂಗಳಯಾನ ಸಂಚಾರ ಅವಧಿಯನ್ನು ಹೆಚ್ಚುವರಿ ಇಂಧನ ಕಾರಣದಿಂದ ಕಳೆದ ಮಾರ್ಚ್ ನಲ್ಲಿ ಆರು ತಿಂಗಳವರೆಗೆ ವಿಸ್ತರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


