ದೇಶ

ಮ್ಯಾಗಿ ಮೇಲೆ 4 ರಾಜ್ಯಗಳ ನಿಷೇಧ

ನೆಸ್ಲೆ ಇಂಡಿಯಾದ ಮ್ಯಾಗಿ ನೂಡಲ್ಸ್ ಮೇಲೆ ಮತ್ತೆ 4 ರಾಜ್ಯಗಳು ನಿಷೇಧ ಹೇರಿವೆ. ಗುಜರಾತ್, ಜಮ್ಮು-ಕಾಶ್ಮೀರ 1 ತಿಂಗಳು, ಉತ್ತರಾಖಂಡ 3 ತಿಂಗಳು ಹಾಗಬ ತಮಿಳುನಾಡು ಸರ್ಕಾರ ಮ್ಯಾಗಿ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿವೆ...

ಮ್ಯಾಗಿ ಮೇಲೆ 4 ರಾಜ್ಯಗಳ ನಿಷೇಧ
ಮ್ಯಾಗಿ ಮೇಲೆ 4 ರಾಜ್ಯಗಳ ನಿಷೇಧ ( ಸಾಂದರ್ಭಿಕ ಚಿತ್ರ)
Published On :

ನವದೆಹಲಿ/ಮುಂಬೈ: ನೆಸ್ಲೆ ಇಂಡಿಯಾದ ಮ್ಯಾಗಿ ನೂಡಲ್ಸ್ ಮೇಲೆ ಮತ್ತೆ 4 ರಾಜ್ಯಗಳು ನಿಷೇಧ ಹೇರಿವೆ. ಗುಜರಾತ್, ಜಮ್ಮು-ಕಾಶ್ಮೀರ 1 ತಿಂಗಳು, ಉತ್ತರಾಖಂಡ 3 ತಿಂಗಳು ಹಾಗಬ ತಮಿಳುನಾಡು ಸರ್ಕಾರ ಮ್ಯಾಗಿ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿವೆ.

ಈ ನಾಲ್ಕು ರಾಜ್ಯಗಳಲ್ಲಿ ನೆಸ್ಲೆ ಇಂಡಿಯಾ ಕಂಪನಿಗೆ ಮ್ಯಾಗಿ ಸ್ಟಾಕ್ ಅನ್ನು ಕೂಡಲೇ ಹಿಂಪಡೆಯುವಂತೆ ಆದೇಶಿಸಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸರ್ಕಾರಗಳು ಆಹಾರ ಮತ್ತು ಔಷಧ ಇಲಾಖೆಯ ವರದಿಯನ್ನು ಕಾಯುತ್ತಿವೆ. ಆದಾದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿವೆ. ಗುಜರಾತ್‍ನಲ್ಲಿ ಮ್ಯಾಗಿ ಮಾತ್ರವಲ್ಲದೆ ಇತರ ಜನಪ್ರಿಯ ಬ್ರಾಂಡ್‍ಗಳಾದ ಸನ್ ಫೀಸ್ಟ್ ಮತ್ತು ಎಸ್.ಕೆ.ಫೂಡ್ಸ್ ಗಳ ನೂಡಲ್ಸ್ ಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದರಿಂದ ಅವುಗಳ ಮೇಲೆ ಕೂಡ ನಿಷೇಧ ಹೇರಿದೆ.

ಅರುಣಾಚಲ ಪ್ರದೇಶ ಮತ್ತು ಪುದುಚೇರಿ ಸರ್ಕಾರಗಳು ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು ವರದಿಗಾಗಿ ಕಾಯುತ್ತಿವೆ. ವರದಿ ಕೇಳಿದ ಕೇಂದ್ರ: ಮ್ಯಾಗಿ ನೂಡಲ್ಸ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಶಿಮ್ಲಾದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಎಲ್ಲ ರಾಜ್ಯ ಸರ್ಕಾರಗಳು ವರದಿ ಸಲ್ಲಿಸಿದ ಬಳಿಕ ದೇಶಾದ್ಯಂತ ನಿಷೇಧ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ಹೆಚ್ಚಿನ ಪರೀಕ್ಷೆ: ಕೇರಳದಲ್ಲಿ ಮ್ಯಾಗಿ ಜತೆಗೆ ಇತರ ಸಿದ್ಧಪಡಿಸಿದ ಆಹಾರಗಳನ್ನೂ ಪರೀಕ್ಷೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ. ಇತರ ಜನಪ್ರಿಯ ಬ್ರಾಂಡ್‍ಗಳ ನೂಡಲ್ಸ್ ಗಳನ್ನು ಆಯ್ಕೆ ಮಾಡಿ ಪರೀಕ್ಷಿಸುವಂತೆ ಆಹಾರ ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ. ಮತ್ತಷ್ಟು ಸ್ಟೋರ್‍ಗಳಲ್ಲಿ: ವಾಲ್‍ಮಾರ್ಟ್ ಮತ್ತು ಮೆಟ್ರೋ ಸ್ಟೋರ್‍ಗಳಿಂದಲೂ ಈಗ ನಿಧಾನವಾಗಿ ಮ್ಯಾಗಿ ನೂಡಲ್ಸ್ ಗಳು ಮಾಯವಾಗಲಾರಂಭಿಸಿವೆ. ವಿವಾದದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ನೆಸ್ಲೆ ಷೇರು ಕುಸಿತ
ಹಾಲಿ ಉಂಟಾಗಿರುವ ವಿವಾದ ದಿಂದಾಗಿ ಬಾಂಬೆ ಷೇರು ಪೇಟೆಯಲ್ಲಿ ನೆಸ್ಲೆ ಕಂಪನಿಯ ಷೇರುಗಳು ಕುಸಿದಿವೆ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ ಕೂಡ ಕಂಪನಿಯ ಷೇರುಗಳು ಶೇ.2.94ರಷ್ಟು ಕುಸಿದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.