ದೇಶ

ಮೆಮನ್ ಅಂತ್ಯಕ್ರಿಯೆಯಲ್ಲಿ ಉಗ್ರರು: ರಾಯ್

ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರು ಸಂಭಾವ್ಯ ಭಯೋತ್ಪಾದಕರಿದ್ದರು ಎನ್ನುವ ಮೂಲಕ ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಹೊಸ ವಿವಾದ ಸೃಷ್ಟಿಸಿದ್ದಾರೆ...

ಮೆಮನ್ ಅಂತ್ಯಕ್ರಿಯೆಯಲ್ಲಿ ಉಗ್ರರು: ರಾಯ್
ತ್ರಿಪುರಾ ರಾಜ್ಯಪಾಲ ತಥಾಗತ ರಾಯ್
Published On :

ತ್ರಿಪುರಾ: ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರು ಸಂಭಾವ್ಯ ಭಯೋತ್ಪಾದಕರಿದ್ದರು ಎನ್ನುವ ಮೂಲಕ ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಹೊಸ ವಿವಾದ  ಸೃಷ್ಟಿಸಿದ್ದಾರೆ.

ರಾಯ್ ಹೇಳಿಕೆಗ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಯಾಕೂಬ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರ ಮೇಲೆ ಗುಪ್ತಚರ ಇಲಾಖೆ ಕಣ್ಣಿಡಬೇಕು. ಸಂಬಂಧಿಗಳು, ಆಪ್ತ ಮಿತ್ರರ ಚಲನವಲನ ಗಮನಿಸಬೇಕು. ಅವರು ಉಗ್ರರಾಗಿರಲಿಕ್ಕೂ ಸಾಕು ಎಂದು ಅನುಮಾನ ವ್ಯಕ್ತಪಡಿಸಿ ರಾಯ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರಿಂದ ಎಚ್ಚೆತ್ತ ರಾಯ್, ಕೂಡಲೇ ಸ್ಪಷ್ಟನೆ ನೀಡಿದ್ದಾರೆ.

`ದೇಶದ ಭದ್ರತೆ ಕುರಿತು ರಾಜ್ಯಪಾಲರಾದವರಿಗೆ ಕಾಳಜಿ ಇರಬೇಕು. ಮುನ್ನೆಚ್ಚರಿಕೆ ಯಿಂದ ನಾನು ಹಾಗೆ ಹೇಳಿದ್ದೇನೆ'. ಇದು ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ನೀಡಿದ ಹೇಳಿಕೆಯಲ್ಲ ಎಂದಿದ್ದಾರೆ. ಥತಾಗತಾ ರಾಯ್ ಅವರು ಕೋಮುದ್ವೇಷ ಬಿತ್ತುವ ಟ್ವೀಟ್ ಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.