ದೇಶ

ಹದಿಹರೆಯದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 5 ಬಂಧನ

17 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಐವರು ಕಾಮುಕರನ್ನು ಬಂಧಿಸುವಲ್ಲಿ ಪೊಲೀಸರು ಶನಿವಾರ ಯಶಸ್ವಿಯಾಗಿದ್ದಾರೆ...

ಹದಿಹರೆಯದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 5 ಬಂಧನ
ಹದಿಹರೆಯದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 5 ಬಂಧನ (ಸಾಂದರ್ಭಿಕ ಚಿತ್ರ)
Published On :

ಮಿನಿನಗರ (ಗುಜರಾತ್): 17 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಐವರು ಕಾಮುಕರನ್ನು ಬಂಧಿಸುವಲ್ಲಿ ಪೊಲೀಸರು ಶನಿವಾರ ಯಶಸ್ವಿಯಾಗಿದ್ದಾರೆ.

6 ಮಂದಿ ಕಾಮುಕರು ಯುವತಿಯನ್ನು ಅಪಹರಿಸಿ ಮನಿನಗರದ ಹೊರವಲಯದಲ್ಲಿರುವ ಹೋಟೆಲ್ ಒಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಯುವತಿ ಸಂಜೆಯಾದರೂ ಮನೆಗೆ ಬರದಿರುವುದನ್ನು ಕಂಡ ಪೋಷಕರು ಗಾಬರಿಯಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದಾಗ ಯುವತಿ ಪೊಲೀಸರಿಗೆ ದೊರಕಿದ್ದಾಳೆ. ವಿಚಾರಣೆ ನಡೆಸಿದಾಗ 6 ಮಂದಿ ಯುವಕರ ಗುಂಪು ತನ್ನನ್ನು ಎಳೆದೊಯ್ದು ಅತ್ಯಾಚಾರವೆಸಗಿ ಸ್ಥಳದಿಂದ ಓಡಿಹೋದರು. ನಂತರ ಸ್ಥಳೀಯ ದೂರವಾಣಿ ಮೂಲಕ ನನ್ನ ಗೆಳತಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು ಎಂದು ಹೇಳಿದ್ದಾಳೆ. ಆರೋಪಿಗಳ ಹುಡುಕಾಟ ನಡೆಸಿದ ಪೊಲೀಸರು ಇದೀಗ 5 ಆರೋಪಿಗಳನ್ನು ಬಂಧಿಸಿದ್ದು, ಓರ್ವ ಆರೋಪಿಗಾಗಿ ಮತ್ತೆ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.