ದೇಶ

ಕಲಾಂ ಹೆಸರಲ್ಲಿ ಪ್ರಶಸ್ತಿ, 'ಯುವ ನವೋದಯ ದಿನ'ವಾಗಿ ಕಲಾಂ ಜನ್ಮದಿನ ಆಚರಣೆ

ನಿನ್ನೆ ರಾಮೇಶ್ವರಂನಲ್ಲಿ ಮಣ್ಣಲ್ಲಿ ಮಣ್ಣಾದ ಭಾರತ ರತ್ನ, ದೇಶ ಕಂಡ ಅಪ್ರತಿಮ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹೆಸರಲ್ಲಿ ಪ್ರಶಸ್ತಿಯೊಂದನ್ನು...

ಕಲಾಂ ಹೆಸರಲ್ಲಿ ಪ್ರಶಸ್ತಿ, 'ಯುವ ನವೋದಯ ದಿನ'ವಾಗಿ ಕಲಾಂ ಜನ್ಮದಿನ ಆಚರಣೆ
ಎಪಿಜೆ ಅಬ್ದುಲ್ ಕಲಾಂ
Published On :

ಚೆನ್ನೈ: ನಿನ್ನೆ ರಾಮೇಶ್ವರಂನಲ್ಲಿ ಮಣ್ಣಲ್ಲಿ ಮಣ್ಣಾದ ಭಾರತ ರತ್ನ, ದೇಶ ಕಂಡ ಅಪ್ರತಿಮ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹೆಸರಲ್ಲಿ ಪ್ರಶಸ್ತಿಯೊಂದನ್ನು ನೀಡಲಾಗುವುದು ಮತ್ತು ಅವರ ಜನ್ಮದಿನವನ್ನು 'ಯುವ ನವೋದಯ ದಿನ'ವನ್ನಾಗಿ ಆಚರಿಸಲಿ ತಮಿಳುನಾಡು ಸರ್ಕಾರ ನಿರ್ಧರಿಸಿದೆ.

'ಡಾ.ಎಪಿಜೆ ಅಬ್ದುಲ್ ಕಲಾ ಪ್ರಶಸ್ತಿ' ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ಪ್ರಶಸ್ತಿಯನ್ನು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯೊಂದು ವಿಜ್ಞಾನ, ಮಾನವ ಸಂಸ್ಕೃತಿ ಹಾಗೂ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ನೀಡಿ ಗೌರವಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ತಿಳಿಸಿದ್ದಾರೆ.

'ಈ ಮೂಲಕ ಬಲಿಷ್ಠ ಭಾರತ ಹಾಗೂ ಸಂಪನ್ಮೂಲ ತಮಿಳುನಾಡು' ನಿರ್ಮಾಣ ಮಾಡುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಜಯಲಲಿತಾ ಅವರು ಹೇಳಿದ್ದಾರೆ.

ಕಲಾಂ ಪ್ರಶಸ್ತಿ 8 ಗ್ರಾಂ ಬಂಗಾರದ ಪದಕ, ಐದು ಲಕ್ಷ ರುಪಾಯಿ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿ ರಾಜ್ಯದ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದ್ದು, ಇದೇ ವರ್ಷದಿಂದ ನೀಡಲಾಗುವುದು ಎಂದು ತಮಿಳುನಾಡು ಸಿಎಂ ತಿಳಿಸಿದ್ದಾರೆ.

ಇನ್ನು ತಮಿಳುನಾಡು ಸರ್ಕಾರ ಕಲಾಂ ಜನ್ಮದಿನವಾದ ಅಕ್ಟೋಬರ್ 15ರಂದು 'ಯುವ ಜಾಗೃತಿ ದಿನ'ವನ್ನಾಗಿ ಆಚರಿಸಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.