ಯಾಕೂಬ್ ಮೆಮನ್‌ನ ಕೊನೆಯ ಆಸೆ ಇದಾಗಿತ್ತು!
'ನನ್ನ ಮಗಳನ್ನು ನೋಡಬೇಕು' ಯಾಕೂಬ್ ಮೆಮನ್‌ನ ಅಂತಿಮ ಅಭಿಲಾಷೆ ಇದಾಗಿತ್ತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ...

ನಾಗ್ಪುರ್: 'ನನ್ನ ಮಗಳನ್ನು ನೋಡಬೇಕು' ಯಾಕೂಬ್ ಮೆಮನ್‌ನ ಅಂತಿಮ ಅಭಿಲಾಷೆ ಇದಾಗಿತ್ತು.
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್‌ನ್ನು ಗಲ್ಲಿಗೇರಿಸುವ ಮುನ್ನ ಅಂತಿಮ ಆಸೆ ಏನೆಂದು ಕೇಳಲಾಯಿತು. ಅದಕ್ಕೆ ಆತ ನನಗೆ ನನ್ನ ಮಗಳನ್ನು ಭೇಟಿ ಮಾಡಿಸಿ ಎಂದಿದ್ದಾನೆ.
ಆತನ ಆಸೆಯಂತೆ ಜೈಲು ಅಧಿಕಾರಿಗಳು ಮೆಮನ್‌ನ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಆಮೇಲೆ ಮೆಮನ್‌ನ 21ರ ಹರೆಯದ ಮಗಳ ಜತೆ ಫೋನ್ ಸಂಭಾಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಮಗಳ ಜತೆ ಫೋನ್ ನಲ್ಲಿ ಮಾತನಾಡಿದ ನಂತರ ಮೆಮನ್ ನಿರಾಳನಾಗಿದ್ದ ಎಂದು ಮೆಮನ್ ಸಹೋದರ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


