ದೇಶ

ಸೋಲಾರ್ ಹಗರಣ; ಕೇರಳ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ ಉದ್ಯಮಿ

ಕೇರಳದಲ್ಲಿ ಭಾರಿ ಗದ್ದಲ ಎಬ್ಬಿಸಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕುರ್ಚಿಗೆ ಕಂಟಕವಾಗಿರುವ ಸೋಲಾರ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ಮೂಲದ ಉದ್ಯಮಿ ಎಂ.ಕೆ.ಕುರುವಿಲಾ ಎಂಬುವವರು ಉಮ್ಮನ್ ಚಾಂಡಿ ಅವರ ವಿರುದ್ಧ ಗುರುವಾರ ಗಂಭೀರ...

ಸೋಲಾರ್ ಹಗರಣ; ಕೇರಳ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ ಉದ್ಯಮಿ
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ
Published On :

ಕೊಚ್ಚಿ: ಕೇರಳದಲ್ಲಿ ಭಾರಿ ಗದ್ದಲ ಎಬ್ಬಿಸಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕುರ್ಚಿಗೆ ಕಂಟಕವಾಗಿರುವ ಸೋಲಾರ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ಮೂಲದ ಉದ್ಯಮಿ ಎಂ.ಕೆ.ಕುರುವಿಲಾ ಎಂಬುವವರು ಉಮ್ಮನ್ ಚಾಂಡಿ ಅವರ ವಿರುದ್ಧ ಗುರುವಾರ ಗಂಭೀರ ಆರೋಪ ಮಾಡಿದ್ದು, ಹಗರಣ ಸಂಬಂಧ ಮುಖ್ಯಮಂತ್ರಿಯವರು 1 ಕೋಟಿ ಲಂಚ ಬೇಡಿಕೆ ಇಟ್ಟಿದ್ದರು ಎಂದು ಹೇಳಿದ್ದಾರೆ.

ಈ ಕುರಿತಂತೆ ಇಂದು ಮಾತನಾಡಿರುವ ಅವರು, ಕೇರಳದಲ್ಲಿ ಸೋಲಾರ್ ಯೋಜನೆಯನ್ನು ಅನುಷ್ಠಾನಗೊಳಿಸಲು ವಿದೇಶದಿಂದ ಯಂತ್ರಗಳು ಬೇಕಿತ್ತಲ್ಲದೇ, ಯೋಜನೆಗೆ 4000 ಕೋಟಿ ಹಣದ ಅವಶ್ಯಕತೆಯಿತ್ತು. ಹೀಗಾಗಿ ಆ್ಯಂಡ್ರ್ಯೂ ಎಂಬ ವ್ಯಕ್ತಿ ತನಗೆ ಮುಖ್ಯಮಂತ್ರಿಗಳ ಪರಿಚಯವಿದ್ದು, ಯೋಜನೆಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ. 2011ರ ಜುಲೈ 2 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿದ. ಈ ವೇಳೆ ಚಾಂಡಿಯವರು ಆ್ಯಂಡ್ರ್ಯೂ ತನ್ನ ಸಂಬಂಧಿ ಎಂದು ಹೇಳಿಕೊಂಡಿದ್ದರು. ನಂತರ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಮತಿಬೇಕಿದೆ ಎಂದು ಹೇಳಿದ ಅವರು, ಈ ಕುರಿತಂತೆ ಮಾತುಕತೆಗಳನ್ನು ನಡೆಸಲಾಗುತ್ತದೆ. ಆದರೆ, ಅನುಮತಿ ಪಡೆಯಬೇಕಾದರೆ 1 ಕೋಟಿ ಹಣ ಲಂಚ ಬೇಕೆಂದು ಕೇಳಿದರು. ಹಾಗಾಗಿ ಹಣವನ್ನು ಕಂತುಗಳ ರೀತಿಯಲ್ಲಿ ನೀಡಲಾಯಿತು ಎಂದು ಹೇಳಿದ್ದಾರೆ.

ಇದೇ ವೇಳೆ ಎಡಿಜಿಪಿ ಕೆ. ಪದ್ಮಕುಮಾರ್, ಎಸಿಪಿ ಬಿಜೊ ಅಲೆಕ್ಸಾಂಡರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಸತರ್ ವಿರುದ್ಧ ಆರೋಪ ವ್ಯಕ್ತಪಡಿಸಿರುವ ಅವರು, ಪ್ರಕರಣ ಸಂಬಂಧ ಪೊಲೀಸರ ಬಳಿ ದೂರು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಆರೋಪಿಗಳ ಕಡೆಯಿಂದ ಲಂಚ ಪಡೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದಾರೆ. ದೂರು ನೀಡಿದ ನನ್ನ ವಿರುದ್ಧವೇ ಅಧಿಕಾರಿಗಳು ಒತ್ತಡ ಹೇರುತ್ತಿದ್ದು, ದೂರು ಹಿಂಪಡೆಯುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.