ದೇಶ

ಹೆಚ್‌ಐವಿ ಸಂಶೋಧಕಿ ಡಾ. ಸುನಿತಿ ಸಾಲೋಮನ್ ವಿಧಿವಶ

ಭಾರತದಲ್ಲಿ ಮೊಟ್ಟಮೊದಲು ಹೆಚ್‌ಐವಿ ವೈರಾಣು ಇರುವಿಕೆಯನ್ನು ಪತ್ತೆಹಚ್ಚಿದ ಮಹಿಳಾ ವೈದ್ಯೆ ಡಾ. ಸುನಿತಿ ಸಾಲೋಮನ್...

ಹೆಚ್‌ಐವಿ ಸಂಶೋಧಕಿ ಡಾ. ಸುನಿತಿ ಸಾಲೋಮನ್ ವಿಧಿವಶ
ಡಾ.ಸುನಿತಿ ಸಾಲೋಮನ್
Published On :

ಚೆನ್ನೈ: ಭಾರತದಲ್ಲಿ ಮೊಟ್ಟಮೊದಲು ಹೆಚ್‌ಐವಿ ವೈರಾಣು ಇರುವಿಕೆಯನ್ನು ಪತ್ತೆಹಚ್ಚಿದ ಮಹಿಳಾ ವೈದ್ಯೆ ಡಾ. ಸುನಿತಿ ಸಾಲೋಮನ್ ವಿಧಿವಶರಾಗಿದ್ದಾರೆ.

ಡಾ. ಸುನಿತಿ(74) ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಮಂಗಳವಾರ ತಮಿಳುನಾಡಿನ ಚೆನ್ನೈನಲ್ಲಿರುವ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.

1986 ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ಪ್ರಾಧ್ಯಾಪಕಿಯಾಗಿ ಸೇವೆ ಆರಂಭಿಸಿದ್ದ ಡಾ. ಸುನಿತಿ ಸಾಲೋಮನ್, ತನ್ನ ವಿದ್ಯಾರ್ಥಿಗಳಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದರು. ಈ ವೇಳೆಯಲ್ಲೇ ವಿದ್ಯಾರ್ಥಿಗಳ ಸಹಯೋಗದಲ್ಲಿ ತಮಿಳುನಾಡಿನ ಲೈಂಗಿಕ ಕಾರ್ಯಕರ್ತೆಯರಲ್ಲಿ ಪ್ರಪ್ರಥಮವಾಗಿ ಎಚ್ಐವಿ ವೈರಾಣು ಇರುವುದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಡಾ. ಸುನಿತಿ ಅವರ ಈ ಸಾಧನೆ ಇಡೀ ಭಾರತವೇ ಅವರತ್ತ ದೃಷ್ಠಿ ಬೀರುವಂತೆ ಮಾಡಿತು. ಏಕೆಂದರೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಎಚ್ಐವಿ ಇರುವಿಕೆ ತಿಳಿದದ್ದೆ ಡಾ. ಸುನಿತಿ ಅವರ ಸಂಶೋಧನೆಯಿಂದ.

ಡಾ.ಸುನಿತಿ ಕೇವಲ ವೈದ್ಯೆಯಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಅವರು ಸಂಶೋಧಕಿಯಾಗಿ, ಆಪ್ತ ಸಮಾಲೋಚಕಿಯಾಗಿ, ಶಿಕ್ಷಣ ತಜ್ಞೆಯಾಗಿ, ಜತೆಗೆ ಎಚ್ಐವಿ ರೋಗಿಗಳ ಪಾಲಿನ ಮ್ಯಾಚ್ ಮೇಕರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.