ವೈರಲ್ ಆಯ್ತು ಕಲಾಂ ಅವರ ಕೊನೇ ಕ್ಷಣದ 'ನಕಲಿ ಫೋಟೋ'
ನಿಜವಾಗಿಯೂ ಅದು ಕಲಾಂ ಅವರ ಕೊನೇ ಕ್ಷಣದ ಫೋಟೋ ಅಲ್ಲ. 8 ವರ್ಷಗಳ ಹಿಂದೆ ಸಂಗೀತ ನಾಟಕ ಅಕಾಡೆಮಿಯೊಂದರ ಕಾರ್ಯಕ್ರಮದಲ್ಲಿ ಕಲಾಂ ಅವರು ಜಾರಿ ಬಿದ್ದಾಗ...

ಬೆಂಗಳೂರು: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ನಿಧನರಾದರು ಎಂಬ ಸುದ್ದಿ ಬರುತ್ತಿದ್ದಂತೆಯೇ ವಾಟ್ಸಾಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ತಾಣದಲ್ಲಿ ಅಬ್ದುಲ್ ಕಲಾಂ ಕುಸಿದು ಬೀಳುತ್ತಿರುವ ಫೋಟೋವೊಂದು ಸಿಕ್ಕಾಪಟ್ಟೆ ಹರಿದಾಡಿತ್ತು. ಅಬ್ದುಲ್ ಕಲಾಂ ಅವರು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ನಿಧನರಾಗಿದ್ದಾರೆ. ಅವರ ಕೊನೆಯ ಫೋಟೋ ಇದು ಎಂಬ ಶೀರ್ಷಿಕೆ ಹೊತ್ತ ಆ ಫೋಟೋ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿತ್ತು.
ನಿಜವಾಗಿಯೂ ಅದು ಕಲಾಂ ಅವರ ಕೊನೇ ಕ್ಷಣದ ಫೋಟೋ ಅಲ್ಲ. 8 ವರ್ಷಗಳ ಹಿಂದೆ ಸಂಗೀತ ನಾಟಕ ಅಕಾಡೆಮಿಯೊಂದರ ಕಾರ್ಯಕ್ರಮದಲ್ಲಿ ಕಲಾಂ ಅವರು ಜಾರಿ ಬಿದ್ದಾಗ ತೆಗೆದ ಫೋಟೋ ಅದಾಗಿತ್ತು. ಈ ಹಳೇ ಫೋಟೋ ನಿನ್ನೆ ಕಲಾಂ ನಿಧನರಾದಾಗ ಅವರ ಕೊನೆಯ ಫೋಟೋ ಎಂಬ ಹಣೆಪಟ್ಟಿ ಹೊತ್ತು ಅಂತರ್ಜಾಲದಲ್ಲಿ ಹರಿದಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


