ದೇಶ ಬಿಟ್ಟ 61 ಸಾವಿರ ಶ್ರೀಮಂತರು
14 ವರ್ಷಗಳಲ್ಲಿ ಭಾರತ 61ಸಾವಿರ ಕೋಟ್ಯಧೀಶರು ದೇಶ ತೊರೆದು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಹೀಗೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ...

Published On :
ನವದೆಹಲಿ: 14 ವರ್ಷಗಳಲ್ಲಿ ಭಾರತ 61ಸಾವಿರ ಕೋಟ್ಯಧೀಶರು ದೇಶ ತೊರೆದು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಹೀಗೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಮೊದಲನೇ ಸ್ಥಾನ ಚೀನಾಕ್ಕೆ. ತೆರಿಗೆ, ಭದ್ರತೆ, ಮಕ್ಕಳ ಶಿಕ್ಷಣ ಇವೇ ಮುಂತಾದ ಕಾರಣಗಳಿಗಾಗಿ ಕೋಟ್ಯಧೀಶರು ದೇಶ ತೊರೆದಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
`ನ್ಯೂವರ್ಲ್ಡ್ ವೆಲ್ತ್' ಮತ್ತು `ಲಿಯೋ ಗ್ಲೋಬಲ್' ಎಂಬ ಎರಡು ಸಂಸ್ಥೆಗಳು ನಡೆಸಿರುವ ಅಧ್ಯಯನದಿಂದ ಈ ಮಾಹಿತಿ ಹೊರಬಿದ್ದಿದೆ. ``ಹೊರದೇಶಗಳಲ್ಲಿ ಪೌರತ್ವ ಪಡೆಯುವ ಸಲುವಾಗಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳು ಒಂದು ದಶಕದ ಅವಧಿಯಲ್ಲಿ ಸಾಕಷ್ಟು ವೃದ್ಧಿಯಾಗಿದೆ'' ಎಂದು ಅಧ್ಯಯನದ ವರದಿ ಹೇಳಿದೆ. ಕಳೆದ ಒಂದು ದಶಕದಲ್ಲಿ (2000- 2014) ಭಾರತದ 61ಸಾವಿರ ಶ್ರೀಮಂತರು ವಿದೇಶಕ್ಕೆ ತೆರಳಿ, ಅಲ್ಲಿಯೇ ನೆಲೆ ಕಂಡು ಕೊಂಡಿದ್ದಾರೆ. ಇದೇ ಅವಧಿಯಲ್ಲಿ ಚೀನಾ ದ 91 ಸಾವಿರ ಸಿರಿವಂತರು ವಿದೇಶದಲ್ಲಿ ನೆಲೆ ಕಂಡುಕಂಡುಕೊಂಡಿದ್ದಾರೆ.
ಭಾರತದ ಶ್ರೀಮಂತರು, ಅರಬ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಗೆ ಹೆಚ್ಚಾಗಿ ವಲಸೆ ಹೋಗಿದ್ದಾರೆ. ಚೀನಾದ ಶ್ರೀಮಂತರು, ಅಮೆರಿಕ, ಹಾಂಕಾಂಗ್, ಸಿಂಗಾಪುರ ಮತ್ತು ಇಂಗ್ಲೆಂಡ್‍ಗೆ ಹೆಚ್ಚಾಗಿ ತೆರಳಿದ್ದಾರೆ ಎಂದು ವರದಿ ಹೇಳಿದೆ. ಇಂಗ್ಲೆಂಡ್ ಅತಿ ಹೆಚ್ಚು ವಲಸಿಗರಿಗೆ ತನ್ನಲ್ಲಿ ಜಾಗ ನೀಡಿದ್ದು, ಒಂದು ದಶಕದಲ್ಲಿ 1.25 ಲಕ್ಷ ಜನರಿಗೆ ಪೌರತ್ವ ನೀಡಿದೆ. ಇನ್ನುಳಿದಂತೆ, ಪ್ರಾನ್ಸ್‍ನ 42 ಸಾವಿರ, ಇಟಲಿ 23 ಸಾವಿರ, ರಷ್ಯ 20 ಸಾವಿರ, ಇಂಡೋನೇಷ್ಯ 12 ಸಾವಿರ, ದಕ್ಷಿಣ ಆಫ್ರಿಕ 8 ಸಾವಿರ, ಈಜಿಪ್ಟ್ ನ 7 ಸಾವಿರ ಶ್ರೀ ಮಂತರು ದೇಶ ತೊರೆದು ಬೇರೆಡೆ ನೆಲೆ ಕಂಡುಕೊಂಡುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


