ದ್ವೇಷಮಯ ಮಾಹಿತಿ ತಡೆಯಲು 49 ವೆಬ್‍ಸೈಟ್‍ಗಳಿಗೆ ತಡೆ
ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಪೂರಿತ ಮಾಹಿತಿ ಪ್ರಸಾರ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ, 40 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಲು ನಿರ್ಧರಿಸಿದೆ...

Published On :
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಪೂರಿತ ಮಾಹಿತಿ ಪ್ರಸಾರ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ, 40 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಲು ನಿರ್ಧರಿಸಿದೆ.
ಅವುಗಳು ಸಮಾಜದ ಹಿತಕ್ಕೆ ಧಕ್ಕೆ ತರುವಂಥ ಮಾಹಿತಿಗಳನ್ನು ಮತ್ತು ವಿಡಿಯೋಗಳನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಜೂ.29ರಂದೇ ಮಾಹಿತಿ ತಂತ್ರಜ್ಞಾನ ಇಲಾಖೆ ಆದೇಶ ಹೊರಡಿಸಿದೆ. ಎಲ್ಲ ಇಂಟರ್‍ನೆಟ್ ಸೇವಾ ಪೂರೈಕೆದಾರರಿಗೆ ಕೂಡ ಸರ್ಕಾರ ಆದೇಶಿಸಿದೆ. ಭಯೋತ್ಪಾದಕರು ಮುಸ್ಲಿಂ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡು ಪ್ರಚೋದನಾಕಾರಿ ಯಾಗಿರುವ ಮಾಹಿತಿ, ವಿಡಿಯೋಗಳನ್ನು ಜಾಲ ತಾಣಗಳಲ್ಲಿ ಅಪ್‍ಲೋಡ್ ಮಾಡಲು ಮುಂದಾಗಿವೆ. ಅದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಕೆಲವೊಂದು ಮಾಹಿತಿ ಈಗಲೂ ಸಿಗುತ್ತಿದೆ.
ಅವುಗಳನ್ನೂ ತೆಗೆದು ಹಾಕುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರ ಜತೆಗೆ ದೂರಸಂಪರ್ಕ ಇಲಾಖೆ ಜು.9ರಂದು ಆದೇಶ ಹೊರಡಿಸಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷಮಯ ಮಾಹಿತಿ, ಪೋಸ್ಟ್ ಮತ್ತು ವಿಡಿಂಯೋಗಳನ್ನು ನಿಯಂತ್ರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಇಂಟರ್‍ನೆಟ್ ಸೇವಾ ಪೂರೈಕೆದಾರರಿಗೆ ತಾಕೀತು ಮಾಡಿದೆ.
ವೆಬ್‍ಸೈಟ್ ಮರುವಿನ್ಯಾಸ: ಶೀಘ್ರದಲ್ಲೇ ದೇಶದ ಎಲ್ಲ ಸರ್ಕಾರಿ ವೆಬ್‍ಸೈಟ್‍ಗಳು ಅಂಗವೈಕಲ್ಯವಿರುವ ವ್ಯಕ್ತಿಗಳಿಗೂ ಸುಲಭವಾಗಿ ಬಳಸಲು ಸಾಧ್ಯವಾಗುವಂತೆ ವಿನ್ಯಾಸಗೊಳ್ಳಲಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸುಮಾರು 6 ಸಾವಿರ ವೆಬ್‍ಸೈಟ್‍ಗಳಲ್ಲಿ ಕನಿಷ್ಠ ಶೇ.50ರಷ್ಟನ್ನು ಮುಂದಿನ ಜುಲೈ ಹೊತ್ತಿಗೆ ಸಂಪೂರ್ಣವಾಗಿ ವಿಕಲಚೇತನರ ಬಳಕೆಗೆ ಸಲೀಸಾಗುವಂತೆ ಮಾರ್ಪಡಿಸುವುದಾಗಿ ಸಾಮಾಜಿಕ ನ್ಯಾಯ ಇಲಾಖೆ ತಿಳಿಸಿದೆ. ಈ ಬಗ್ಗೆ ಇಲಾಖೆ ಅರ್ನೆಟ್ ಇಂಡಿಯಾಗೆ ಪತ್ರ ಬರೆದಿದ್ದು ಸದ್ಯದಲ್ಲೇ ಕಾರ್ಯ ಆರಂಭವಾಗಲಿದೆ.ಇದೇ ವೇಳೆ ಅಂಗವಿಕಲರ ಸಬಲೀಕರಣ ಇಲಾಖೆಯ ವೆಬ್ ಸೈಟ್ ಕೂಡ ಕೆಲದಿನಗಳಲ್ಲೇ ಪ್ರಾರಂಭವಾಗುವುದಾಗಿ ಕಚೇರಿ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಕೇಂದ್ರ ಸರ್ಕಾರunion Governmentprovocation ContentWebsites Blockಪ್ರಚೋದನಕಾರಿ ಅಂಶವೆಬ್ ಸೈಟ್ ಗಳ ನಿಷೇಧ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


