10 ಕಿ.ಮೀ ಮ್ಯಾರಥಾನ್ ನಲ್ಲಿ ಓಡಿದ 7 ತಿಂಗಳ ಗರ್ಭಿಣಿ!
ಏಳು ತಿಂಗಳ ಗರ್ಭಿಣಿಯೊಬ್ಬಳು ಮ್ಯಾರಥಾನ್ ನಲ್ಲಿ ಓಡಿ ಅಚ್ಚರಿ...

ಚೆನ್ನೈ: ಏಳು ತಿಂಗಳ ಗರ್ಭಿಣಿಯೊಬ್ಬಳು ಮ್ಯಾರಥಾನ್ ನಲ್ಲಿ ಓಡಿ ಅಚ್ಚರಿ ಮೂಡಿಸಿದ್ದಾಳೆ.
ಚೆನ್ನೈನ ಭವಾನಿ ಸಿವಂ ಎಂಬ ಏಳು ತಿಂಗಳ ಗರ್ಭಿಣಿ ಭಾನುವಾರ ಬೆಸೆಂಟ್ ನಗರದ ಓಲ್ ಕೋಟ್ಟ್ ಶಾಲೆಯಿಂದ ಓಡಲು ಪ್ರಾರಂಭಿಸಿ ಆರ್.ಎ.ಪುರಂನ ಚೆಟ್ಟಿನಾಡ್ ವಿದ್ಯಾಶ್ರಮ್ ವರೆಗೆ 10 ಕಿಲೋ ಮೀಟರ್ ದೂರವನ್ನು ಕೇವಲ ಒಂದು ಘಂಟೆ 29 ನಿಮಿಷದಲ್ಲಿ ತಲುಪುವ ಮೂಲಕ ಸಾಧನೆ ಮಾಡಿದ್ದಾರೆ.
ವಿದೇಶದಲ್ಲಿ ಸಾಕಷ್ಟು ಗರ್ಭಿಣಿ ಮಹಿಳೆಯರು ಈ ರೀತಿ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುವುದು ಸಹಜ. ಆದರೆ, ಆ ಮಹಿಳೆಯರಿಂದಲೇ ಸ್ಪೂರ್ತಿಯಾಗಿ ತೆಗೆದುಕೊಂಡ ಭವಾನಿ 10 ಕಿ.ಮೀಟರ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದಾರೆ.
ಇದಕ್ಕೆ ಕುಟುಂಬದಸ್ಥರು ವಿರೋಧ ವ್ಯಕ್ತಪಡಿಸಿದ್ದರೂ, ವೈದ್ಯರ ಅನುಮತಿ ಪಡೆದೇ ಇವರು ಇದರಲ್ಲಿ ಭಾಗವಹಿಸಿದ್ದಾರೆ. ತಾನೂ ಈ ಸಮಯದಲ್ಲಿ ಓಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಹಾಗಾಗಿ ಯಾವುದೇ ಅಂಜಿಕೆಯಿಲ್ಲದೇ ಓಡಿದೆ. ಓಟದ ಸಂದರ್ಭದಲ್ಲಿ ನನಗೇನೂ ಆಯಾಸವಾಗಿಲ್ಲ. ನನಗೆ ತುಂಬಾ ಆರಾಮವೆನಿಸಿತ್ತು ಎಂದಿರುವ ಭವಾನಿ ತಮ್ಮ ಇಚ್ಛೆ ಪೂರೈಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


