ಯಾಕುಬ್ ಪರ ಸಲ್ಮಾನ್ ಟ್ವೀಟ್; ಸಲ್ಲು ಟ್ವೀಟ್ ಹಾಸ್ಯಾಸ್ಪದ-ಅರ್ಥಹೀನ: ಸಲೀಂ ಖಾನ್
1993ರ ಮುಂಬೈ ಬಾಂಬ್ ಸ್ಫೋಟ ಸಂಬಂಧ ಮರಣದಂಡನೆ ಶಿಕ್ಷೆಗೊಳಗಾಗಿರುವ ಅಪರಾಧಿ ಯಾಕುಬ್ ಮೆಮನ್ ಪರವಾಗಿ ಸಲ್ಮಾನ್ ಮಾತನಾಡಿರುವುದು ಸರಿಯಿಲ್ಲ...

ಮುಂಬೈ: 1993ರ ಮುಂಬೈ ಬಾಂಬ್ ಸ್ಫೋಟ ಸಂಬಂಧ ಮರಣದಂಡನೆ ಶಿಕ್ಷೆಗೊಳಗಾಗಿರುವ ಅಪರಾಧಿ ಯಾಕುಬ್ ಮೆಮನ್ ಪರವಾಗಿ ಸಲ್ಮಾನ್ ಮಾತನಾಡಿರುವುದು ಸರಿಯಿಲ್ಲ. ಸಲ್ಮಾನ್ ಮಾಡಿರುವ ಟ್ವೀಟ್'ಗಳನ್ನು ನಾನು ಬೆಂಬಲಿಸಲ್ಲ ಎಂದು ತಂದೆ ಸಲೀಮ್ ಖಾನ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿರುವುದು ಸರಿಯಲ್ಲ. ಸಲ್ಮಾನ್ ಖಾನ್ ಬರೆದಿರುವುದೆಲ್ಲವೂ ಅನರ್ಥಕಾರಿಯಾಗಿವೆ. ಈ ವಿಷಯದ ಬಗ್ಗೆ ಸಲ್ಮಾನ್ ಅಜ್ಞಾನಿಯಾಗಿದ್ದಾನೆ. ಜನರು ಈತನ ಮಾತನ್ನು ಗಂಭೀರವಾಗಿ ಪರಿಗಣಿಸಬಾರದು" ಎಂದು ಸಲ್ಮಾನ್ ಖಾನ್ ರ ತಂದೆ ಸಲೀಮ್ ಮನವಿ ಮಾಡಿಕೊಂಡಿದ್ದಾರೆ.
ಟ್ವೀಟರ್ ನಲ್ಲಿ ಸಲ್ಮಾನ್ ಬರೆದುಕೊಂಡಿದ್ದು ಹೀಗೆ...
ಕಳೆದ ಮೂರು ದಿನಗಳಿಂದ ಈ ರೀತಿ ಟ್ವೀಟ್ ಬರೆಯಲು ಇಚ್ಛಿಸಿದ್ದೆ. ಆದರೆ ಟ್ವೀಟ್ ಮಾಡಲು ಭಯ ಕಾಡುತ್ತಿತ್ತು. ಆದರೆ ಆತನನ್ನ ನಂಬಿಕೊಂಡು ಆತನ ಕುಟುಂಬವಿದೆ. ಸಹೋದರನನ್ನ ಗಲ್ಲಿಗೇರಿಸಬೇಡಿ, ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನನ್ನ ಗಲ್ಲಿಗೇರಿಸಿ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


