ಹಿಮಾಲಯದ ಶೃಂಗಕ್ಕೆ ನಳಿನಿ ಸೇನ್‍ಗುಪ್ತಾ ಹೆಸರು
ಹಿಮಾಲಯದ ಹಮ್ಟಾ ಪಾಸ್ಪ್ರದೇಶದ 5260 ಪರ್ವತ ಶೃಂಗಕ್ಕೆ ಖ್ಯಾತಪರ್ವತಾರೋಹಿ ನಳಿನಿ ಸೇನ್‍ಗುಪ್ತಾ...

ಪುಣೆ: ಹಿಮಾಲಯದ ಹಮ್ಟಾ ಪಾಸ್ಪ್ರದೇಶದ 5260 ಪರ್ವತ ಶೃಂಗಕ್ಕೆ ಖ್ಯಾತ ಪರ್ವತಾರೋಹಿ ನಳಿನಿ ಸೇನ್‍ಗುಪ್ತಾ ಅವರ ಹೆಸರಿಡಲಾಗಿದೆ.
ಗಿರಿಪ್ರೇಮಿ ಎಂಬಪರ್ವತಾರೋಹಣ ಸಂಸ್ಥೆಯ ತಂಡ ವೊಂದು ಇತ್ತೀಚೆಗೆ 5260 ಶೃಂಗಕ್ಕೆ ತಲುಪಿದ್ದು, ಇದಕ್ಕೆ `ಮೌಂಟ್ ನಳಿನಿ' ಎಂದು ನಾಮಕರಣ ಮಾಡಿದ್ದಾರೆ. ಹಿಮಾಲಯದ ಹೊಸ ಪರ್ವತ ಶೃಂಗಕ್ಕೆ ಯಾವ ತಂಡ ಮೊದಲು ಏರುತ್ತದೋ ಆ ತಂಡವೇ ಪರ್ವತಶ್ರೇಣಿಗೆ ನಾಮಕರಣ ಮಾಡುತ್ತದೆ.
ಅದರಂತೆ, ಗಿರಿಪ್ರೇಮಿ ತಂಡವು 70ರ ದಶಕದ ಖ್ಯಾತ ಪರ್ವತಾರೋಹಿ ನಳಿನಿ ಅವರಿಗೆ ಈ ಗೌರವ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಳಿನಿ, ``ನನಗಂತೂ ಖುಷಿಯಾಯಿತು. ನಾನು ಆದಷ್ಟು ಬೇಗಬೇಸ್‍ಕ್ಯಾಂಪ್‍ಗೆ ಹೋಗುತ್ತೇನೆ. ಈಗ ವಯಸ್ಸಾಗಿರುವ ಕಾರಣ ನನಗೆ ಪರ್ವತಾ ರೋಹಣ ಸಾಧ್ಯವಿಲ್ಲ'' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


