ದೇಶ

ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ರಾಜಸ್ಥಾನದ ಈ ಹಳ್ಳಿಗಳು ಸಜ್ಜು

ಈ ವರ್ಷ ಆಗಸ್ಟ್ 15 ರಂದು ಪ್ರಧಾನಿಗೆ ರಾಜಸ್ಥಾನದ ಈ ನಾಲ್ಕು ಹಳ್ಳಿಗಳ ಜನತೆ ಉಡುಗೊಯನ್ನು ನೀಡಲು ನಿರ್ಧರಿಸಿದ್ದಾರೆ.

ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ರಾಜಸ್ಥಾನದ ಈ ಹಳ್ಳಿಗಳು ಸಜ್ಜು
ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿರುವ ಶೌಚಾಲಯ(ಸಾಂದರ್ಭಿಕ ಚಿತ್ರ)
Published On :

ರಾಜಸ್ಥಾನ: 2014 ರ ಆಗಸ್ಟ್ 15 ರಂದು ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭಾಷಣ ಮಾಡಿ, ಬಯಲು ಶೌಚಾಲಯ ಪದ್ಧತಿಯನ್ನು ಕೊನೆಗಾಣಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಇದಾಗಿ ಕೇವಲ ಒಂದೇ ವರ್ಷದಲ್ಲಿ ರಾಜಸ್ಥಾನದ ಗ್ರಾಮದ ಜನತೆ ಪ್ರಧಾನಿ ಮೋದಿ ಅವರ ಕನಸನ್ನು ನನಸಾಗಿ ಸುವತ್ತ ಹೆಜ್ಜೆ ಇಟ್ಟಿದ್ದಾರೆ.  

ಶೌಚಾಲಯ ವ್ಯವಸ್ಥೆಯನ್ನು ಹೊಂದುವಂತೆ ನೀಡಿದ್ದ ಪ್ರಧಾನಿ ಮೋದಿಯ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜಸ್ಥಾನದ ಆನ್ವ್ಲೋಜ್ ಗ್ರಾಮಪಂಚಾಯಿತ್ತಿ ವ್ಯಾಪ್ತಿಗೆ ಬರುವ ಆನ್ವ್ಲೋಜ್, ವಸನ್, ರಾತುಜಾ, ಥಲುಂಡಾ  ಗ್ರಾಮಗಳು  ಇನ್ನು 15 ದಿನಗಳಲ್ಲಿ ಸಂಪೂರ್ಣವಾಗಿ ಶೌಚಾಲಯ ವ್ಯವಸ್ಥೆಯನ್ನು ಹೊಂದಲು ನಿರ್ಧರಿಸಿವೆ. ಈ ವರ್ಷ ಆಗಸ್ಟ್ 15 ರಂದು ಪ್ರಧಾನಿಗೆ  ಶೌಚಾಲಯ ಪದ್ಧತಿಯಿಂದ ಮುಕ್ತವಾಗಿರುವ ಗ್ರಾಮಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

ಇನ್ನು 15 ದಿನಗಳಲ್ಲಿ ಗ್ರಾಮದ ಪ್ರತಿ ಮನೆ, ಶಾಲೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೆಲವು ತಿಂಗಳ ಹಿಂದೆಯೇ ಗ್ರಾಮಪಂಚಾಯಿತಿಯಿಂದ ನೋ ಟಾಯ್ಲೆಟ್ ನೋ ಮ್ಯಾರೇಜ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣ ಮಾಡಲು ಒತ್ತಾಯಿಸುತ್ತಿದ್ದಾರೆ.
 ವಿವಾಹ ನಡೆಯುವ ಮನೆಗಳಲ್ಲಿ ವರನ ಕುಟುಂಬದವರು ಸೌಚಾಲಯ ನಿರ್ಮಿಸುವುದಾಗಿ ಘೋಷಣೆ ಮಾಡಬೇಕೆಂದು ಗ್ರಾಮಪಂಚಾಯಿತಿ ಷರತ್ತು ವಿಧಿಸಿದೆ. ಅಲ್ಲದೇ ಇದನ್ನು ವಿವಾಹ ಆಹ್ವಾನ ಪತ್ರಿಕೆಯಲ್ಲೂ ಪ್ರಕಟಿಸಬೇಕಾಗಿ ಗ್ರಾಮಪಂಚಾಯಿತಿ ಆದೇಶಿಸಿದೆ. ಮಾಡುವೆ ನಡೆಯಬೇಕೆಂದರೆ ಅದಕ್ಕಾಗಿ ಗ್ರಾಮಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರ(ಎನ್.ಒ.ಸಿ) ಪಡೆಯುವುದು ಕಡ್ಡಾಯವಾಗಿದೆ. ಗ್ರಾಮಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರ ಮನೆಯಲ್ಲಿ ಶೌಚಾಲಯ ನಿರ್ಮಿಸಿದ್ದರೆ ಮಾತ್ರ ಎನ್.ಒ.ಸಿ ನೀಡಲಾಗುತ್ತದೆ. ಹಲವು ತಿಂಗಳುಗಳಿಂದ್ಲ ನಡೆಯುತ್ತಿರುವ ಈ ಅಭಿಯಾನದ ಪರಿಣಾಮ ಇಂದು ಗ್ರಾಮದ ಬಹುತೇಕ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿದ್ದು, ನಾಲ್ಕು ಗ್ರಾಮಗಳು ಕೆಲವೇ ದಿನಗಳಲ್ಲಿ ಬಯಲು ಶೌಚಾಲಯ ಪದ್ಧತಿಯಿಂದ ಮುಕ್ತವಾಗಲಿವೆ. ಈ ಮೂಲಕ ಪ್ರಧಾನಿ ಮೋದಿ ಅವರ  ಶೌಚಾಲಯ ನಿರ್ಮಾಣ ಮಾಡುವ ಕರೆಗೆ ಗ್ರಾಮಸ್ಥರು ಸ್ಪಂದಿಸಿದ್ದಾರೆ.
ಈಗಾಗಲೇ ಈ ಅಭಿಯಾನಕ್ಕಾಗಿ ರೂ.55 ಲಕ್ಷ ಬಿಡುಗಡೆ ಮಾಡಲಾಗಿದ್ದು ಆನ್ವ್ಲೋಜ್ ಗ್ರಾಮಪಂಚಾಯಿತ್ತಿ ವ್ಯಾಪ್ತಿಯ 4 ಗ್ರಾಮಗಳು ಬಯಲು ಶೌಚಾಲಯ ಮುಕ್ತ (ODF ) ಗುರಿಯನ್ನು ಮುಟ್ಟಿವೆ. ಕಳೆದ ವರ್ಷ ಪ್ರಧಾನಿ ನೀಡಿದ್ದ ಕರೆಗೆ ಸ್ಪಂದಿಸುವ ಮೂಲಕ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಈ ಗ್ರಾಮದ ಜನರು ಉಡುಗೊರೆ ನೀಡಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.