ದೇಶ

ಪತ್ರಕರ್ತರಿಗೆ ಲಂಚ ನೀಡಿದ್ದೆ ಎಂದ ಬಿಜೆಪಿ ಶಾಸಕಿಯ ವಿಡಿಯೋ ವೈರಲ್

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಜಸ್ಥಾನದ ಬಿಜೆಪಿ ಶಾಸಕಿ, ಚುನಾವಣಾ ಸಮಯದಲ್ಲಿ ನಗದು ತುಂಬಿದ ಪ್ಯಾಕೆಟ್ ಗಳನ್ನು ಪ್ರಾದೇಶಿಕ ಪತ್ರಕರ್ತರಿಗೆ

ಪತ್ರಕರ್ತರಿಗೆ ಲಂಚ ನೀಡಿದ್ದೆ ಎಂದ ಬಿಜೆಪಿ ಶಾಸಕಿಯ ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಶಾಸಕಿ ಶಿಮ್ಲಾ ಬಾವ್ರಿ
Published On :

ಬಿಕನೇರ್: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಜಸ್ಥಾನದ ಬಿಜೆಪಿ ಶಾಸಕಿ, ಚುನಾವಣಾ ಸಮಯದಲ್ಲಿ ನಗದು ತುಂಬಿದ ಪ್ಯಾಕೆಟ್ ಗಳನ್ನು ಪ್ರಾದೇಶಿಕ ಪತ್ರಕರ್ತರಿಗೆ ಹಂಚಿದ್ದಾಗಿಯೂ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲಾ ಅವುಗಳನ್ನು ಸ್ವೀಕರಿಸಿದರು ಎಂದು ಹೇಳಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಅನೂಪ್ ಘರ್ ನ ಬಿಜೆಪಿ ಶಾಸಕ ಶಿಮ್ಲಾ ಬಾವ್ರಿ ಅವರು ಶ್ರೀಗಂಗಾನಗರ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜುಲೈ ೧೮ರಂದು ಈ ವಿಷಯ ಬಹಿರಂಗಪಡಿಸಿದ್ದು, ಈ ಕಾರ್ಯಕ್ರಮದ ವಿಡಿಯೋ ಅಂತರ್ಜಾಲ ತಾಣದಗಾಲ್ಲಿ ವೈರಲ್ ಆಗಿ ವೀಕ್ಷಣೆಗೆ ಒಳಪಟ್ಟಿದೆ.

ಆದರೆ ನಂತರ ಇದನ್ನು ಅಲ್ಲಗೆಳೆದಿರುವ ಶಾಸಕಿ, ನಾನು ಅಂತಹ ವಿಷಯ ಹೇಳೇ ಇಲ್ಲ, ವಿಡಿಯೋ ತಿರುಚಲಾಗಿದೆ ಎಂದಿದ್ದಾರೆ.

ಈ ವಿಡಿಯೋದಲ್ಲಿ, ಶಾಸಕಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ರಾವಿಯಾ, ಘಡ್ಸಾನ ಮತ್ತು ಅನೂಪ್ ಘರ್ ಪ್ರದೇಶಗಳ ಪತ್ರಕರ್ತರಿಗೆ ನಗದು ಪ್ಯಾಕೆಟ್ಗಳನ್ನು ನೀಡಿದ್ದು, ಅವರಲ್ಲಿ ಮೂವರು ಪತ್ರಕರ್ತರು ಶಾಸಕಿ ಆಯ್ಕೆಯಾದ ಮೇಲಷ್ಟೇ ಹಣ ಸ್ವೀಕರಿಸುವುದಾಗಿ ಹೇಳಿ ಹಿಂದಿರುಗಿಸಿದರು ಎಂದು ಹೇಳಿರುವುದು ದಾಖಲೆಯಾಗಿದೆ.

ಪತ್ರಕರ್ತರು ತಮ್ಮ ವೃತ್ತಿಯ ಮೌಲ್ಯವನ್ನು ಅರಿಯಬೇಕು ಎಂದು ಶಾಸಕಿ ಸೂಚಿಸಿದ್ದಾರೆ. ಇದನ್ನು ವಿರೋಧಿಸಿ ಪ್ರಾದೇಶಿಕ ಪತ್ರಕರ್ತರು ಮುಖ್ಯಮಂತ್ರಿ, ಚುನಾವಣ ಆಯೋಗ ಮತ್ತು ಜಿಲ್ಲ ಕಲೆಕ್ಟರ್ ಗಳಿಗೆ ದೂರು ನೀಡಿ ಶಾಸಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.