ಕೆಲಸಕ್ಕೆ ಹಾಜರಾಗದಂತೆ ಲೆಫ್ಟಿನೆಂಟ್ ಕಚೇರಿ ಸೂಚಿಸಿತ್ತು: ಸ್ವಾತಿ ಮಳಿವಾಳ್
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ಥಾನ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಕಚೇರಿಗೆ ಬೀಗ ಹಾಕುತ್ತಿರುವುದರಿಂದ ಕೆಲಸಕ್ಕೆ ಹಾಜರಾಗದಂತೆ...

ನವದೆಹಲಿ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ಥಾನ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಕಚೇರಿಗೆ ಬೀಗ ಹಾಕುತ್ತಿರುವುದರಿಂದ ಕೆಲಸಕ್ಕೆ ಹಾಜರಾಗದಂತೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ಕರೆ ಬಂದಿತ್ತು ಎಂದು ಸ್ವಾತಿ ಮಳಿವಾಳ್ ಗುರುವಾರ ಹೇಳಿದ್ದಾರೆ.
ಡಿಸಿಡಬ್ಲ್ಯೂ ಆಗಿ ನೇಮಕಗೊಂಡಿದ್ದ ಸ್ವಾತಿ ಮಳಿವಾಳ್ ಅವರನ್ನು ನಿನ್ನೆಯಷ್ಟೇ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಅನೂರ್ಜಿತಗೊಳಿಸಿದ್ದರು. ಇದೀಗ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸ್ವಾತಿ ಮಳಿವಾಳ್ ಅವರು, ಲೆಫ್ಟಿನೆಂಟ್ ಗವರ್ನರ್ ಅವರಿಂದ ದೂರವಾಣಿ ಕರೆ ಬಂದಿತ್ತು. ಕರೆಯಲ್ಲಿ ಗವರ್ನರ್ ಅವರು ಕಚೇರಿಗೆ ಬೀಗ ಹಾಕಲಾಗುತ್ತಿದ್ದು, ನಾಳೆಯಿಂದ ಕಚೇರಿಗೆ ಬರದಂತೆ ಹೇಳಿದ್ದರು ಎಂದು ಹೇಳಿದ್ದಾರೆ.
ನನ್ನಲ್ಲಿರುವ ನೈತಿಕ ಜವಾಬ್ದಾರಿ ಕೆಲಸವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದಿನಿಂದಲೂ ಮಹಿಳೆಯರಿಗಾಗಿ ಕೆಲಸ ಮಾಡುತ್ತಲೇ ಬಂದಿದ್ದೇನೆ. ಮಹಿಳೆಯರಿಗಾಗಿ ದುಡಿಯುವ ನನ್ನ ಕೆಲಸ ಎಂದಿಗೂ ನಿಲ್ಲುವುದಿಲ್ಲ. ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತಲೇ ಇರುತ್ತೇನೆ. ಸರ್ಕಾರ ಇದೀಗ ನನಗೆ ನೀಡಿರುವ ಕರ್ತವ್ಯವನ್ನು ನಾನು ಪಾಲಿಸುತ್ತೇನೆ. ಈ ವಿವಾದವೇನು ತುಂಬಾ ದೊಡ್ಡದೇನಲ್ಲ. ಸಾಧ್ಯವಾದಷ್ಟು ಬೇಗ ವಿವಾದ ಇತ್ಯರ್ಥಗಳ್ಳುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಸ್ವಾತಿ ಮಳಿವಾಳ್ ಅವರ ಈ ಹೇಳಿಕೆಯನ್ನು ತಳ್ಳಿಹಾಕಿರುವ ಲೆಫ್ಟಿನೆಂಟ್ ಕಚೇರಿಯು ಗವರ್ನರ್ ನಜೀಬ್ ಜಂಗ್ ಆಗಲಿ ಅಥವಾ ಕಚೇರಿಯಿಂದ ಯಾವುದೇ ಅಧಿಕಾರಿಗಳಿಂದಾಗಲೀ ಸ್ವಾತಿ ಮಳಿವಾಳ್ ಅವರಿಗೆ ಕರೆ ಮಾಡಿಯೇ ಇಲ್ಲ. ಯಾರಿಗೂ ಯಾವುದೇ ಸೂಚನೆ ನೀಡಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


