ದೇಶ

ಭಾರತದೊಂದಿಗೆ ಮಾತುಕತೆ ಬೇಡ: ಉಗ್ರ ಸಯೀದ್

ಭಾರತ ಮತ್ತು ಪಾಕ್ ನಡುವಿನ ಬಾಂಧವ್ಯ ವೃದ್ಧಿಯ ಪ್ರಯತ್ನಗಳ ನಡುವೆ, ಕಾಶ್ಮೀರಿಗಳನ್ನು ಒಳಗೊಳ್ಳದ ಯಾವುದೇ...

ಭಾರತದೊಂದಿಗೆ ಮಾತುಕತೆ ಬೇಡ: ಉಗ್ರ ಸಯೀದ್
ಹಫೀಜ್ ಸಯೀದ್ - ನವಾಜ್ ಷರೀಫ್
Published On :

ಲಾಹೋರ್: ಭಾರತ ಮತ್ತು ಪಾಕ್ ನಡುವಿನ ಬಾಂಧವ್ಯ ವೃದ್ಧಿಯ ಪ್ರಯತ್ನಗಳ ನಡುವೆ, ಕಾಶ್ಮೀರಿಗಳನ್ನು ಒಳಗೊಳ್ಳದ ಯಾವುದೇ ಮಾತುಕತೆಗೆ ಮುಂದಾಗಬಾರದು ಎಂದು ಮುಂಬೈ ದಾಳಿ ರೂವಾರಿ, ಉಗ್ರ ಹಫೀಜ್ ಸಯೀದ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಗೆ ಎಚ್ಚರಿಕೆ ನೀಡಿದ್ದಾನೆ.

ಪ್ರಧಾನಿ ಷರೀಫ್ ಯಾವುದೇ ಕಾರಣಕ್ಕೂ ಭಾರತದೊಂದಿಗೆ ಏಕಪಕ್ಷೀಯ ಮೃತ್ರಿಗೆ ಕೈಚಾಚಬಾರದು. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು, ಅವರು ಅಂತಹ ಯತ್ನ ನಡೆಸಿದರೆ ಅದು ಕಾಶ್ಮೀರ ಜನರ ಭಾವನೆಗೆ ಧಕ್ಕೆ ತರಲಿದೆ ಎಂದು ಸಯೀದ್ ಹೇಳಿದ್ದಾನೆ.

ಕಾಶ್ಮೀರಿ ಜನರನ್ನು ಒಳಗೊಳ್ಳದ ಯಾವುದೇ ಮಾತುಕತೆ ಪ್ರಕ್ರಿಯೆ ಅರ್ಥಹೀನ ಎಂದಿರುವ ಸಯೀದ್, ಈ ವಿಷಯದಲ್ಲಿ ಎಂತಹದ್ದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದಂತೆ ಷರೀಫ್ ಅವರಿಗೆ ತಿಳಿ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.