ಸರಣಿ ಅತ್ಯಾಚಾರಿಯಿಂದ 30 ಮಕ್ಕಳ ಕಗ್ಗೊಲೆ: ದೆಹಲಿ ಪೊಲೀಸ್
ಬಂಧಿತ ಸೀರಿಯಲ್ ರೇಪಿಸ್ಟ್ 30 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ಕೊಂದಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ...

ನವದೆಹಲಿ: ಬಂಧಿತ ಸೀರಿಯಲ್ ರೇಪಿಸ್ಟ್ 30 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ಕೊಂದಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
24 ವರ್ಷದ ರವಿಂದರ್ ಕುಮಾರ್ ದೆಹಲಿಯಲ್ಲಿ ಇಂತ ಹೀನಾಯ ಕೃತ್ಯ ನಡೆಸಿರುವುದಾಗಿ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ವಿಕ್ರಮ್ ಜಿತ್ ಸಿಂಗ್ ಹೇಳಿದ್ದಾರೆ.
ಮಕ್ಕಳಿಗೆ ಸಿಹಿತಿಂಡಿ ಮತ್ತು ಹಣದ ಆಮೀಷವೊಡ್ಡಿ ಕರೆದೊಯ್ಯುತ್ತಿದ್ದ ಕಾಮುಕ ರವೀಂದರ್ ಕುಮಾರ್ ಇದುವರೆಗೂ ದೆಹಲಿಯಲ್ಲಿ 30 ಮಕ್ಕಳನ್ನು ಕೊಂದಿರುವುದಾಗಿ ಹೇಳಿದ್ದಾನೆ.
ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವ ರವೀಂದರ್ ಕುಮಾರ್ ಅತಿಯಾಗಿ ಮದ್ಯ ಸೇವಿಸಿದಾಗ ತಾನು ನಿಯಂತ್ರಣ ಕಳೆದುಕೊಂಡು ಮೃಗದ ರೀತಿ ವರ್ತಿಸುತ್ತಿದ್ದೆ ಎಂದು ತಿಳಿಸಿದ್ದಾನೆ.
ಕಳೆದ ವರ್ಷ ಬಿಗಂಪುರದ ಬಾಲಕನನ್ನು ಅಪಹರಿಸಿ, ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಂತರ ಕತ್ತು ಸೀಳಿದ್ದ. ಬಾಲಕ ಮೃತಪಟ್ಟಿದ್ದಾನೆಂದು ಭಾವಿಸಿ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಬಿಸಾಡಿ ಹೋಗಿದ್ದ. ಆದರೆ ಬದುಕುಳಿದ ಬಾಲಕ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು.
ಆದರೆ ಈ ಪ್ರಕರಣದಲ್ಲಿ ಕುಮಾರ್ ಜಾಮೀನಿನ ಮೇಲೆ ಹೊರಬಂದಿದ್ದ. ಪೊಲೀಸರಿಗೆ ಈತನ ಪೂರ್ವಾಪರ ಗೊತ್ತಿಲ್ಲದ ಕಾರಣ ಆತನನ್ನು ಬಿಡುಗಡೆಗೊಳಿಸಿದ್ದರು.
ಮತ್ತೆ ತನ್ನ ಚಾಳಿ ಮುಂದುವರಿಸಿದ ಕುಮಾರ್ ಬಿಗಂಪುರದಲ್ಲಿ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಜುಲೈ 16 ರಂದು ಕುಮಾರ್ ಕುಮಾರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


