ಅಸರಾಂ ಬಾಪು ವಿರುದ್ಧ ಆಡಿಯೋ ಟೇಪ್ ನೀಡಿದ ಸಂತ್ರಸ್ತೆ ತಂದೆ
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಸಾಕ್ಷಿ ಹೇಳದಂತೆ ಹಣದ ಆಮೀಷ ಒಡ್ಡಿದ ...

ಬರೈಲ್ಲಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಸಾಕ್ಷಿ ಹೇಳದಂತೆ ಹಣದ ಆಮೀಷ ಒಡ್ಡಿದ ಆಡಿಯೋ ಟೇಪ್ ಒಂದನ್ನು ಅತ್ಯಾಚಾರ ಸಂತ್ರಸ್ತೆ ತಂದೆ ಪೊಲೀಸರಿಗೆ ನೀಡಿದ್ದಾರೆ.
ಫೋನ್ ನಲ್ಲಿ ನಡೆಸಿದ ಸಂಭಾಷಣೆಯನ್ನು ಕೃಪಾಲ್ ಸಿಂಗ್ 8 ತಿಂಗಳ ಹಿಂದೆ ರೆಕಾರ್ಡ್ ಮಾಡಿದ್ದ. ಆತನಿಗೆ ಸಾಕ್ಷಿ ಹೇಳಿದಂತೆ ಅಸಾರಾಂ ಬಾಪು ಆಮೀಷ ವೊಡ್ಡಿದ್ದು, ಕೃಪಾಲ್ ಸಿಂಗ್ ಇದಕ್ಕೆ ಒಪ್ಪದಿದ್ದಾಗ ಜುಲೈ 10 ರಂದು ಷಹಾಜನ್ಪುರ್ ನಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅದರ ಮರುದಿನವೇ ಕೃಪಾಲ್ ಸಿಂಗ್ ಬರೈಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು.
ಕೃಪಾಲ್ ಸಿಂಗ್ ಜೊತೆ ಅಸರಾಂ ಬಾಪು ನಡೆಸಿದ್ದ ಸಂಭಾಷಣೆ ಇರುವ ಆಡಿಯೋ ಕ್ಲಿಪ್ ತಮ್ಮ ಕೈ ಸೇರಿದ್ದು, ಅದರಲ್ಲಿ ಇರುವ ಧ್ವನಿ ಹಾಗೂ ಅಸರಾಂ ಬಾಪು ಧ್ವನಿ ಮಾದರಿ ಪರೀಕ್ಷೆಗೊಳಪಡಿಸಲಾಗುವುದು ಎಂದು ಶಹಜಾನ್ಪುರ ಎಸ್ಪಿ ಬಬ್ಲೂ ಕುಮಾರ್ ಹೇಳಿದ್ದಾರೆ. ಒಂದು ವೇಳೆ ಆಡಿಯೋ ಕ್ಲಿಪ್ ನಲ್ಲಿರುವ ಧ್ವನಿ ಹಾಗೂ ಅಸರಾಂ ಬಾಪು ಧ್ವನಿ ಒಂದೇ ಆಗಿದ್ದರೇ ತನಿಖೆಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


